STORYMIRROR

JAISHREE HALLUR

Comedy Romance Others

4  

JAISHREE HALLUR

Comedy Romance Others

ಏ ಹುಡುಗಾ

ಏ ಹುಡುಗಾ

1 min
336


ಬರೀ ಕವನ ಬರದೂ ಬರದೂ ಮೆಚ್ಚಿಸೋಕಾಗಲ್ಲ ಕಣೋ!

ಒಮೊಮ್ಮೆ ಕವನನೂ ಬೇಡ ಅನಿಸುತ್ತೆ.


ಆವತ್ತು ಹೇಳಿದ್ಯಲ್ಲಾ, ಮರಸುತ್ತೋದೇ ಹಾಡುಗಳ ಚಿತ್ರ ಈ ಕನ್ನಡ ಸಿನೇಮಾದಲ್ಲಿ ಅಂತಾ, ಥೋ! 


ಯಾವತ್ತೂ ನಾ ನಿನ್ನ ಪ್ರೀತಿಸಲೇ ಇಲ್ಲ.

ನೀನೇ ಇಲ್ಲಸಲ್ಲದ್ದನ್ನು ಮಸಾಲೆ ಸೇರಿಸಿ

ಕವನ ಗೀಚಿ ಗೀಚಿ ಬಿಸಾಕ್ತೀಯಾ.


ಆದರೆ ಒಂದಂತೂ ನಿಜ ನೋಡು, ಸಾಹಿತ್ಯ ಅನ್ನೋದಿದೆಯಲ್ಲಾ, ಅದಕ್ಕೆ

ಮನ್ನಣೆ ಕೊಡ್ತೀನಿ, ಬೇಸರ ಮಾಡ್ಕೊಳ್ಳೋಲ್ಲ.


ನಿನ್ನ ಮದುವೆ ಆಗೋ ಹುಡುಗಿಗೆ ಹೀಗೆ ಬರೀ ಕವನದಲ್ಲೇ ಮುಳುಗಿಸಬೇಡ ಕಣೋ, ಓಡಿಬಿಟ್ಟಾಳು..ಹುಶಾರ!


ಆದರೂ ಯಾಕೋ ಏನೋ! ನೀನಂದ್ರೆ ಇಷ್ಟ ಕಣೋ ಹುಡುಗಾ, ಹೇಳೋಕಾಗಲ್ಲ ಬಿಡು, ನಾ ಕವಿಯಲ್ಲ.


ಮೌನಕ್ಕೂ ಕವನ, ಮಾತಿಗೂ ಕವನ, ನಗುವಿಗಂತೂ ಕಂತೆ ಕಂತೆ ಕವನಗಳೇ

ಮಗುವಂತಾ ಮನಸು ನಿನದು ಗೊತ್ತು.


ಅದಕ್ಕೆಂದೇ ನಾನಿಂದು ನಿನ್ನ ನೆನಪಲಿ

ಕಳೆವೆ ಹೊತ್ತು, ಬತ್ತಲಾರದ ಸೊತ್ತು..

ಕುತ್ತುಗಳ ಮರೆಸುವ ಸುಂದರ ವಸ್ತು.



Rate this content
Log in

Similar kannada poem from Comedy