STORYMIRROR

Megha Nadagoud

Comedy Classics Others

4  

Megha Nadagoud

Comedy Classics Others

ಫ್ರೀ ಬಸ್ನೇರಿ

ಫ್ರೀ ಬಸ್ನೇರಿ

1 min
392


ಮನೆಗೆ ಬೀಗ ಹಾಕಿಹಳು

ಗಂಡನ ಚಿಂತೆ ಬಿಟ್ಟಿಹಳು 

ಮಕ್ಕಳನ್ನು ಶಾಲೆಗೆ ಅಟ್ಟಿಹಳು 

ಬಂದಳು ನಾರಿ ಬಿಡಿರಿ ದಾರಿ

ಫ್ರೀ ಬಸ್ನೇರಿ


ದುಡ್ಡಿನ ಚಿಂತೆ ಅವಳಿಗಿಲ್ಲ 

ಫ್ರೀ ಬಸ್ಸು ಇದೆಯಲ್ಲ 

ಬಟ್ಟೆ ಗಂಟು ಕಟ್ಟಿಕೊಂಡು ಹೊರಟಿಹಳಲ್ಲ 

ಬಂದಳು ನಾರಿ ಬಿಡಿರಿ ದಾರಿ

ಫ್ರೀ ಬಸ್ನೇರಿ 


ಪುಣ್ಯಕ್ಷೇತ್ರ ನೋಡುವಳಂತೆ

ದೇವರ ದರ್ಶನ ಮಾಡುವಳಂತೆ

ಸಿಕ್ಕ ಅವಕಾಶ ಬಿಡುವುದಿಲ್ಲವಂತೆ 

ಬಂದಳು ನಾರಿ ಬಿಡಿರಿ ದಾರಿ ಫ್ರೀ ಬಸ್ನೇರಿ


ಊಟದ ಚಿಂತೆ ಇಲ್ಲವಂತೆ 

ದೇವಸ್ಥಾನದ ಪ್ರಸಾದ್ ಸಾಕಂತೆ 

ಸ್ನಾನಕ್ಕೆ ನದಿಯ ನೀರು ಇದೆಯಂತೆ

ಬಂದಳು ನಾರಿ ಬಿಡಿರಿದ್ದಾರೆ ಫ್ರೀ ಬಸ್ನೇರಿ


ಜೊತೆಗೆ ಗೆಳತಿಯರು ಬಂದಿರುವವರಲ್ಲ

ಹರಟೆಗೆ ಏನು ಕಡಿಮೆ ಇಲ್ಲ

ಬಸ್ಸಿನ ತುಂಬಾ ಇವರೆ ಎಲ್ಲ

ಬಂದಳು ನಾರಿ ಬಿಡಿರಿ ದಾರಿ 

ಫ್ರೀ ಬಸ್ನೇರಿ


ಮನೆಗೆ ವಾಪಸ್ ಬರುವ ಸುಳಿವೇ ಇಲ್ಲ

ಗಂಡ ಮಕ್ಕಳ ಕಥೆ ದೇವರೇ ಬಲ್ಲ ನಾರಿ ಶಕ್ತಿಯ ಮಹಿಮೆ ಇದೆಲ್ಲ

ಬಂದಳು ನಾರಿ ಬಿಡಿರಿ ದಾರಿ ಫ್ರೀ ಬಸ್ನೇರಿ  


Rate this content
Log in

Similar kannada poem from Comedy