ಆಷಾಢ ಮಾಸ
ಆಷಾಢ ಮಾಸ
( ಜಾನಪದ ಶೈಲಿಯಲ್ಲಿ ಕವನ)
ಆಷಾಢ ಮಾಸಕ ಮನಸ್ಸಿಗೆ ಬ್ಯಾಸರ ಮನೆಯಲ್ಲಿ ಭಣ ಭಣ ಮಡದಿ ಮನೆ ಒಳಗ ಇಲ್ಲಂತ
ಹೊಟ್ಟೆಗೆ ಹಿಟ್ಟಿಲ್ಲ ತಟ್ಟೆ ಒಳಗ ಅನ್ನವಿಲ್ಲ ಮಡದಿ ಮನೆ ಒಳಗ
ಇಲ್ಲಂತ
ಮಳೆಗಳು ಬರ್ತಾವ ಚಳಿಗಳು ಆಗ್ತಾವ ಮಾಡದಿ ಮನೆ ಒಳಗ ಇಲ್ಲಂತ
ಎತ್ತರ ಹೋದರು ಎತ್ತರ ಬಂದರು ಮತ್ತೆ ಮರಳಿ ಮನೆಗೆ ಬರಬೇಕು ಮಡದಿ ಮನೆ ಒಳಗ ಇಲ್ಲಂತ
ಮಾತನಾಡಿಸುವರಿಲ್ಲ ಕಥೆ ಕೇಳುವರಿಲ್ಲ ಏನಾಯಿತೆಂದು ವಿಚಾರಿಸುವವರಿಲ್ಲ ಮಡದಿ ಮನೆ ಒಳಗ ಇಲ್ಲಂತ
ಹೋದದ್ದು ಹೋಗ್ಯಾಳ ಬೀರ್ ಅಂತ ಬರಲಿಲ್ಲ ಪಂಚಮಿ ಹಬ್ಬ ಮುಗ್ಸಿ ಬರ್ತಾಳಂತ ಮಡದಿ ಮನೆ ಒಳಗ ಇಲ್ಲಂತ
ದಿನಗಳು ಎಣಿಸುತ್ತ ಆಷಾಢಕ್ಕ ಬಯ್ಯುತ್ತ ಕಾಯುತ್ತಲಿರುವೆ ಮಡದಿ ಮನೆ ಒಳಗ ಇಲ್ಲಂತ

