STORYMIRROR

Megha Nadagoud

Classics Inspirational Others

4  

Megha Nadagoud

Classics Inspirational Others

ಬೆಳಕಿನ ಹಬ್ಬ

ಬೆಳಕಿನ ಹಬ್ಬ

1 min
235

ಜ್ಯೋತಿ ನೀ ಬೆಳಗುತಿರಲು

ಪ್ರೀತಿ ಎಲ್ಲ ಕಡೆಗೂ ಹರಡುತ್ತಿರಲು

ಸಂಭ್ರಮಿಸುವ ಸಮಯವಾಗಿರಲು

ನೋವುಗಳನ್ನು ಕೊನೆಗಾಣಿಸಿ ನಲಿಯಲು


ಮನೆಯ ಒಳಗೆ ದೀಪಗಳಿಂದ

ಅಲಂಕಾರ ಮಾಡಿದರೆ ಸಾಲದು

ಸುಂದರ ಮನಸುಗಳನ್ನು ಪ್ರೀತಿಯಿಂದ

ಒಂದಾಗಿಸಿ ಬೆಳಕಿನ ಹಬ್ಬದಿಂದ 


ಮನೆಯ ಒಳಗೆ ಹೊರಗೆ ದೀಪಗಳ ಬೆಳಕು

ತುಂಬಿರಲು ಮನಸೊಳಗೆ ಇರುವ ಕೊಳಕು

ಹೊರಹಾಕಿ ಎಣ್ಣೆಯ ಅಭ್ಯಂಜನದ ಜಳಕ 

ಮಾಡಿ ತಿನ್ನಿಸಿ ಸಿಹಿಯ ಒಂದು ತುಣುಕು


ಏಳು ಬೀಳಿನ ಬದುಕಲಿ

ಬೆಳಕು ಆಗಾಗ ಬರಲಿ

ನಕಾರಾತ್ಮಕ ಕತ್ತಲು ಓಡಿಸಿ

ಸಕಾರಾತ್ಮಕ ಬೆಳಕು ತುಂಬಿಸಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics