ಸ್ತ್ರೀ ಎಂದರೆ ಅಷ್ಟೇ ಸಾಕು
ಸ್ತ್ರೀ ಎಂದರೆ ಅಷ್ಟೇ ಸಾಕು
ಬೆಳಗೆದ್ದು ಮನೆ ಬೆಳಗುವ ಒಡತಿ
ಪತಿಯೇ ಪರ ದೈವ ಎನ್ನುವ ಸತಿ
ಮಕ್ಕಳಿಗೆ ಮಮತೆಯ ತಾಯಿ
ಎಲ್ಲರನ್ನು ಪ್ರೀತಿಸುವ ಕರುಣಾಮಯಿ
ನಿನ್ನೆ ಮೊನ್ನೆಗಳ ನೋವು ಅವಳಿಗಿಲ್ಲ
ನಾಳೆ ಹೇಗೆಂಬುವ ಚಿಂತೆಯಿಲ್ಲ
ಬಂದ ಹಾಗೆ ಬದುಕನ್ನು ಸ್ವೀಕರಿಸಿ
ನೋಯಿಸಿದವರನ್ನು ಆದರದಿಂದ ಸತ್ಕರಿಸಿ
ಬದುಕಲ್ಲಿ ಬಂದ ಖುಷಿಯನ್ನು ಅನುಭವಿಸಿ
ಸಮಾಜದ ನಿಂದನೆಗಳನ್ನು ಧಿಕ್ಕರಿಸಿ
ಬದುಕನ್ನು ಮುನ್ನಡೆಸುವ ಛಲಗಾರ್ತಿ
ಪ್ರೀತಿ ನೀಡುವಲ್ಲಿ ದೊಡ್ಡ ಸಾಹುಕಾರ್ತಿ
ಅವಳಿಲ್ಲದಿರುವ ಮನೆ ಮನೆಯೇ ಅಲ್ಲ
ಸಾವಿರ ಸವಾಲುಗಳಿಗೂ ಹೆದರುವುದಿಲ್ಲ
ನಿನಗೆ ಸ್ತ್ರೀ ಅಂದರೆ ಅಷ್ಟೇ ಸಾಕೆ
ಬಿರುದುಗಳನ್ನು ಕೊಡಲು ಹಿಂಜರಿಕೆ ಏಕೆ.
