STORYMIRROR

Megha Nadagoud

Classics Inspirational Others

4  

Megha Nadagoud

Classics Inspirational Others

ಚಂದಿರನಿಗೆ ಶಾಪವಿತ್ತ

ಚಂದಿರನಿಗೆ ಶಾಪವಿತ್ತ

1 min
294

ಚೌತಿಯ ಸತ್ಕಾರ ಸ್ವೀಕರಿಸಿ ಗಣಪ

ತನ್ನ ವಾಹನ ಇಲಿಯನು ಏರಿ 

ಹೊಟ್ಟೆಯ ತುಂಬಾ ಮೋದಕ ಸೇವಿಸಿ

ಉದರವು ತುಂಬಿ ಬೀರಿಯುತ್ತಲಿರಲು


ಕೈಗೆ ಸಿಕ್ಕ ಸರ್ಪವ ಎಳೆದು

ಹೊಟ್ಟೆಯ ಸುತ್ತ ಕಟ್ಟಿರಲು ಬಿಗಿದು

ಮೂಷಿಕ ಭಾರ ತಡಿಯದೇ ಅಲ್ಲಾಡಲು

ಗಣಪತಿ ಸಮತೋಲನ ತಪ್ಪಿ ಬಿಳಲು


ರಾತ್ರಿಯ ಚಂದ್ರ ಮಿನುಗತ ಇರಲು 

ಉದರವ ನೋಡಿ ಹಾಸ್ಯವ ಮಾಡಿ

ಗಣೇಶನ ಕೋಪಕ್ಕೆ ಬಲಿಯಾದ ಚೌತಿಯಲಿ

ಚಂದಿರನಿಗೆ ಶಾಪವನಿತ್ತ ಗಣೇಶ ಕೋಪದಿ


ಚೌತಿಯ ಚಂದ್ರನ ದರ್ಶನ ಮಾಡಿದರೆ

ಮಾಡದ ಅಪರಾಧಕ್ಕೆ ಗುರಿ ಆಗುವರು

ಅಪವಾದದಿಂದ ತಪ್ಪಿಸಿಕೊಳ್ಳಲು ವಿಘ್ನ ನಿವಾರಕ 

ಗಣಪತಿಯ ಪೂಜಿಸಿ ಪ್ರೀತಿಗೆ ಪಾತ್ರರಾಗಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics