STORYMIRROR

Megha Nadagoud

Classics Inspirational Others

4  

Megha Nadagoud

Classics Inspirational Others

ರಾಮ ಬಂದ

ರಾಮ ಬಂದ

1 min
9

ಬಾಲಕನಾಗಿ ಬಂದೆಯಾ ರಾಮ

ಭಕ್ತರ ಮೇಲೆ ನಿನಗೆಷ್ಟು ಪ್ರೇಮ


ದುಷ್ಟರಿಂದ ದಮನವಾಯಿತು ಮಂದಿರ

ಸಿಸ್ಟರಿಂದ ಸೃಷ್ಟಿಯಾಯಿತು ಭವ್ಯ ಮಂದಿರ 


ಸಂಭ್ರಮದ ಬೀಡಾಯಿತು ನಿನ್ನ ಜನ್ಮಸ್ಥಳ

ಅಯೋಧ್ಯ ನಗರವಿಂದು ಪುಣ್ಯಸ್ಥಳ


ನೂರಾರು ವರ್ಷ ಬಡಿದಾಡಿ ಹೋರಾಡಿ

ಸಂಭ್ರಮಿಸುತಿದೆ ಮನಸ್ಸು ನಿನ್ನ ಗುಡಿ ನೋಡಿ


ನೂರಾರು ಜೀವಗಳ ತ್ಯಾಗ ಯೋಗದಾನ

ಈಗ ಸಿಕ್ಕಿದೆ ಎಲ್ಲ ಆತ್ಮಗಳಿಗೆ

ಸಮಾಧಾನ


ಸಾವಿರಾರು ಭಕ್ತರ ಸಂಭ್ರಮದ ಕಾಣಿಕೆ

ಈಡೇರಿದೆ ವರ್ಷಗಳ ತಪಸ್ಸಿನ ಕೋರಿಕೆ


ದೂರದ ಊರಿಂದ ಸಾಗಿ ಬರುತ್ತಿರುವರು ಜನರು

ನಿನ್ನ ಕಣ್ತುಂಬಿಕೊಳ್ಳಲು ರಾಮ ಭಕ್ತರು


ಸಪ್ತ ತೀರ್ಥಗಳು ಕಾದಿರುವವು

ಅಭಿಷೇಕವಾಗಲೂ

ನೂರಾರು ಖಾಧ್ಯಗಳು ಕಾತರಸಿವೆ ಪ್ರಸಾದವಾಗಲು 


ಕರುನಾಡ ಶಿಲ್ಪಿ ಕೆತ್ತಿಹನು ನಿನ್ನ ಮೂರ್ತಿಯನ್ನು

ಮನಸ್ಸು ಬಯಸುತಿದೆ ಬಂದು ನೋಡಬೇಕು ನಿನ್ನ


ಬಾಲರಾಮನ ಮುಖದಲ್ಲಿ ಮಂದಹಾಸ

 ಮೂರ್ತಿಯಲ್ಲಿ ತುಂಬಿದೆ ದಿವ್ಯ ತೇಜಸ್ಸು


 ಪ್ರಾಣ ಪ್ರತಿಷ್ಠಾಪನೆ ನೆರವೇರಲಿ ಸಂಗಮವಾಗಿ

ಜಗವೆಲ್ಲ ಬದಲಾಗಲಿ ರಾಮನ ರಾಜ್ಯವಾಗಿ


ರಾಮ ನಾಮ ಜಪಿಸಿ ಧನ್ಯರಾಗಿರಿ

ಭಕ್ತಿಯಿಂದ ಶ್ರೀ ರಾಮನನ್ನು ನಂಬಿರಿ


Rate this content
Log in

Similar kannada poem from Classics