STORYMIRROR

Megha Nadagoud

Classics Inspirational Others

4  

Megha Nadagoud

Classics Inspirational Others

ಹೊಂಗಿರಣ

ಹೊಂಗಿರಣ

1 min
484

ಕಾಯುತಿದೆ ಮನ ಹೊಸ ಬೆಳಕಿಗೆ

ತೊಡೆದು ಹಾಕಬೇಕು ಒಳಗಿರುವ ಅಳುಕಿಗೆ

ಸುಧಾರಿಸಿ ಸಾಗಬೇಕು ಸಾಮರಸ್ಯದ ಬದುಕಿಗೆ

ಹಮ್ಮು ಬಿಮ್ಮುಗಳನ್ನು ತಳ್ಳಬೇಕು ಆಚೆಗೆ


ನಿನ್ನೆಯ ನೋವುಗಳು ಸರಿಸಿ

ಬದುಕಿನ ಬತ್ತಿಗೆ ಎಣ್ಣೆ ಸುರಿಸಿ 

ಉರಿಯಬೇಕು ಜ್ಯೋತಿ ಪ್ರಜ್ವಲಿಸಿ

ಜಗತ್ತಿಗೆಲ್ಲಾ ಬೆಳಕು ಪಸರಿಸಿ


ಹೊರಹೊಮ್ಮಿದೆ ಹೊಳಪಿನ ಹೊಂಗಿರಣ 

ಬದುಕಲಿ ಬಂದಿದೆ ಹೊಸ ಆಶಾಕಿರಣ

ಸವಿಯಬೇಕು ಎನಿಸುತ್ತಿದೆ ಹೋಳಿಗೆಯ ಹೂರಣ

ಜೀವನದಿ ಕಟ್ಟಿ ನಲಿಯೊಣ ಹಸಿರು ತೋರಣ  


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics