ಮೌನಭಾರ
ಮೌನಭಾರ


ಮನಸು ಭಾರವಾಗಿದೆ ಮಾತು ಬಾರದಾಗಿದೆ
ಲೋಕದ ಗುಣವ ಕಂಡು ಮಾತು ಮೌನವಾಗಿದೆ
ಎಲ್ಲೋ ಅಡಗಿದೆ ಮತ್ತೆ ಮಾತು ಬಾರದಾಗಿದೆ.
ಸುತ್ತಲೂ ಅಹಮ್ಮಿನ ಕೋಟೆ ಸುತ್ತಿಕೊಂಡಿದೆ
ಮೋಸ ದ್ವೇಷ ಸ್ವಾರ್ಥದಿಂದ ಗಟ್ಟಿಯಾಗಿ ನಿಂತಿದೆ
ಸಪ್ತಸಾಗರ ದಾಟಬಹುದು
ಈ ಗೋಡೆ ಹಾರ ಬೇಕಿದೆ
ಸುಳಿಗೆ ಸಿಲುಕದೆ ಸುಳಿವ ನೀಡದೆ
ಗೋಡೆ ಕುಸಿದು ಹೋಗದೆ
ಮಾತು ಅರಳದೆ ಕಾದಿದೆ
ಜೀವದ ಜೀವನವು ಕನಸು ತುಂಬಿಕೊಂಡಿದೆ
ನನಸಾಗಿ ಬಾಳಿನರ್ಥ ಕಾಣಲೆಂದು ಸಾಗಿದೆ
ಎಡರು ತೊಡರ ಮೆಟ್ಟಿನಿಂತು
ಗುರಿಯ ಮುಟ್ಟಬೇಕಿದೆ
ಮಳೆಗೆ ಬೆದರದೆ ಚಳಿಗೆ ನಡುಗದೆ
ಮನಕೆ ಮನಸು ಹೇಳಿದೆ
ಸೇತುಬಂಧವ ಬಯಸಿದೆ
ಕವಿತೆಯೊಂದ ಬರೆಸಿದೆ