ಗುರಿ
ಗುರಿ
ಸಾಗು ಸಾಗೆಲೆ ಜೀವ
ನೀ ಸೇರು ರೇವ
ಬಾಳ್ಗೊಂದು ಗುರಿಯಿರಲಿ
ಮನದಿ ಛಲವಿರಲಿ
ವಸ್ತುವಿನ ಗುಣವನ್ನು ಅರಿಯುತ್ತ ನೀನು
ಹಿರಿದು ಕಿರಿದೆಂಬ ಭೇದವನು ತೊರೆದು
ಸಾಗಿದರೆ ಸೊಗವುಂಟು ಜಗವು ಕಾಣುವುದು
ಇಲ್ಲದಿರೆ ತಮವು ಬಾಳ ಕವಿಯುವುದು
ಅರಿವೆ ಗುರು ಎಂದರಿಯೆ ಗೆಲುವು ನಿನದಹುದು
ಅನುಭವಿಗಳ ನುಡಿಯ ಕಿವಿಗೊಟ್ಟು ಕೇಳು
ಅನುಭಾವಿಗಳ ಹೃದಯ ಹೇಳದು ಸುಳ್ಳು
ಕೇಳದೆ ಸಾಗಿದರೆ ಜೀವನವೆ ಟೊಳ್ಳು
ಸರಿದಾರಿಯಲಡಿಯಿಡುತ ಬೀಳದಿರು ನೀನು
ಮುಂದೆ ಬೆಳಕ ಕಾಣ್ಬೆ ಅರಿವೆ ಹೊಸ ಬಾಳು
