ಓ ಗುರುವೇ
ಓ ಗುರುವೇ
ನನ್ನೆದೆಯ ಬಾಂದಳದ ಮಿನುಗುತಾರೆ ನೀನು
ನಿನ್ನ ಮನದಾಗಸದ ಚುಕ್ಕಿ ನಾನು
ಬೆವರು ಸುರಿಸಿ ದುಡಿದು ಬೆಳೆಸಿದೆ ನೀನು
ನೋವ ನುಂಗುತ ನಡೆದೆ ಹರಸುತ್ತ ನಮ್ಮನು
ನಿನಗೇನು ಬೇಕೆಂದು ನಾ ಕೇಳಲಿಲ್ಲ
ಕೇಳದೆಯೇ ಆದಷ್ಟು ನೀನಿತ್ತೆಯಲ್ಲ
ಏನೊಂದ ಬಯಸದೆ ಆಕಾಶ ನೀಡುವುದು
ಪ್ರತಿಫಲ ಬಯಸದ ಹೃದಯ ವಿಶಾಲತೆ ನಿನ್ನದು
ನಿನ್ನನು ಬಣ್ಣಿಸಲು ಪದಗಳು ಸಾಲದು ಓ ಗುರುವೇ ( ತಂದೆ )
ನನ್ನೆದೆಯ ಮಿಡಿತದಲಿ ನಿನ್ನ ಹೆಸರಿಟ್ಟಿರುವೆ
ಅನುಕ್ಷಣ ತುಡಿಯುತಿದೆ ಅನುಗಾಲ ಮಿಡಿಯುತಿದೆ
ಮತ್ತೆ ಬರುವೆಯಾ ? ಈ ಭಾವದವನ ನಿನಗಾಗಿ
ಅರ್ಪಣೆ ಸಮರ್ಪಣೆ !
