ನೆನಪು
ನೆನಪು
ಓ ಬಾಲ್ಯವೇ
ನಿನ್ನ ಮಧುರ ನೆನಪು
ನನ್ನ ಸೆಳೆದಿದೆ
ಮಾಸದು ಅಳಿಸದು
ಕೊನೆತನಕ ಉಳಿವುದು
ಹೋದ ಸಮಯ ಬಾರದು ಮತ್ತೆ
ಸಹಪಾಠಿಗಳ ಜೊತೆ
ನುಡಿದ , ಓದಿ ಬರೆದ
ಆ ದಿನಗಳು
ಗೆಳೆಯ ಗೆಳತಿಯರ
ಮನದಾಳದ ಮಾತುಗಳು
ಅಂದಿತ್ತು ಸ್ಫಟಿಕದಂತೆ
ಇಂದು ಹಾಗಿಲ್ಲ
ಪ್ರೀತಿ ವಿಶ್ವಾಸ ಗೌರವ, ಸಹಾಯ,
ಸಹಕಾರ ಎಲ್ಲವೂ ಸೊನ್ನೆ
ಹಣದಿಂದ ಎಲ್ಲದರ ಲೆಕ್ಖ
ಈಗ ಅಂದ ಚೆಂದಕೆ ಗೌರವ
ಅಂದು ಸದ್ಭಾವನೆಗಳಿಗಿತ್ತು ಗೌರವ
ಇಟ್ಟ ಹೆಜ್ಜೆಗಳ ಗುರುತು
ಕಣ್ಣಿನ ಅಲ್ಬಮ್ಮಲಿ ಅಳಿಸಿಲ್ಲ
ಜೊತೆ ಓದಿ ಬೆಳೆದ ಗೆಳೆಯ
ಗೆಳತಿಯರ ಬಗೆಗಿನ ಗೌರವ
ಬತ್ತಿಲ್ಲ
ಚಿತ್ತಾರ ಚೆಲುವೆಯ ಸುಂದರ
ನಗೆಯಂತೆ ಇದೆ ನೆನಪು
ಕುಂದದು ಅದರ ಹೊಳಪು
