ಏಕಾಂಗಿ
ಏಕಾಂಗಿ
ಬಾನದಾರಿಜೊತೆ ಚುಕ್ಕಿತಾರೆಗಳು ಏನೋ ಹೇಳುತಿರುವಾಗ
ಎದೆಯ ಹಾಳೆಯಲಿ ಕವಿತೆಸಾಲುಗಳು ಮೌನ
ಮುರಿಯುತಿರುವಾಗ
ಏಕಾಂಗಿ ನಾನು ಏಕಾಂಗಿ ..... ಎಲ್ಲೋ ಹೊರಟೆನು
ಮರೆಯಾಗಿ, ಬೇರೆ ಯಾರದೋ ಕರೆಗಾಗಿ
ಕರೆದಷ್ಟು ಕರಗೋ ಕನಸಿದೆ, ಮರೆತಷ್ಟು ನೆನೆಸೋ
ನೆನಪಿದೆ ಬದುಕೆಂಬ ಖಾಲಿ ಪುಟದಲ್ಲಿ ಬರೆದಷ್ಟು ಅಳಿಯೋ ಸಾಲಿದೆ
ಕವಲು ದಾರಿಗೆ ಕಳೆಯಾಗಿ, ಎಲ್ಲೋ ಹೊರಟೆನು ಮರೆಯಾಗಿ
ಕಣ್ಣ ಕಡಲಿನಲಿ ಕನಸ ದೋಣಿಗಳು
ಮಾತನಾಡುತಿರುವಾಗ
ಒಲವ ಬೀದಿಯಲಿ ನೆನಪ ಫಲಕಗಳು ನಗುವ
ಬೀರುತಿರುವಾಗ ಏಕಾಂಗಿ ನಾನು ಏಕಾಂಗಿ..... ಕುರುಡು ಬಯಕೆಗೆ
ಬೆಳಕಾಗಿ, ಖಾಲಿ ಕನಸಿನ ನೆರಳಾಗಿ
ಮನಸೇಂಬ ಬರಡು ಶಿಲೆಯಲಿ ಕೊರೆದಷ್ಟು
ಕೊರಗೂ ಮಾತಿದೆ ಬಯಕೆಗಳ ಸಾಲು ಸೆರೆಯಲಿ
ಛಲಬಿಡದೆ ಕೊಲುವ ಕನಸಿದೆ
ಬಯಲು ದಾರಿಗೆ ಹೊರೆಯಾಗಿ, ಎಲ್ಲೋ ಆಚೆಗೆ ಮರೆಯಾಗಿ
ಖುಷಿಯ ಬಳ್ಳಿಯಲಿ ನೋವ ಮುಳ್ಳುಗಳು
ಜನುಮ ಪಡೆದಿರುವಾಗ
ಹೃದಯದಾಳದಲಿ ಮರೆತ ನೆನಪುಗಳು ಕಥೆಯ
ಹೇಳುತಿರುವಾಗ ಏಕಾಂಗಿ ನಾನು ಏಕಾಂಗಿ..... ಎಲ್ಲೋ ಹೊರಟೆನು
ಮರೆಯಾಗಿ, ಮರಳಿ ಬರುವೆನು ಜೊತೆಯಾಗಿ