ನನ್ನೊಮ್ಮೆ ಪ್ರೀತಿಸು.......
ನನ್ನೊಮ್ಮೆ ಪ್ರೀತಿಸು.......
ಕನಸಲ್ಲಿ ನನ್ನೊಮ್ಮೆ ಕಾಡಿಸು
ಮನಸಲ್ಲಿ ಮತ್ತೊಮ್ಮೆ ಮೋಹಿಸು
ನೆನಪೊಳಗಡೆ ನೆನಪಾಗಿ ಪ್ರೇಮಿಸು
ಕತ್ತಲೆಯಲಿ ಕನಸೊಂದ ಕಾಯ್ದಿರಿಸು
ಕುಡಿನೋಟದಲಿ ನಾಚಿಕೆಯನು ಕಲಿಸು
ಪ್ರೇಮದಲಿ ಬಯಕೆಯೊಂದ ತಣಿಸು
ಹೃದಯವನು ನನಗಾಗಿ ಸ್ವೀಕರಿಸು
ಏಕಾಂತದಲಿ ಒಂದಿನಿತು ಆವರಿಸು
ಕೆನ್ನೆಯ ಮಗ್ಗುಲಲಿ ಕಾಡಿಗೆಯನಿರಿಸು
ನಡುವಿನ ಹಾಸಿನಲಿ ಕೈಬೆರಳ ನೇವರಿಸು
ಎಲ್ಲಿಯೂ ಹೋಗದಂತೆ ಹೃದಯವನು ಹಿಡಿದಿರಿಸು
ಕನಸಿನ ಅರಮನೆಯಲಿ ನನ್ನಮ್ಮೆ ಬಂಧಿಸು ಇನ್ನೊಮೆ ಮುದ್ದಿಸು
ತುಟಿಯಂಚಲಿ ಮುತ್ತಿನ ಮಳೆಯನು ಹರಿಸು
ಕಣ್ಣಂಚಲಿ ಹುಸಿ ಕೋಪವನು ಮಣಿಸು
ಸ್ವಪ್ನದಲಿ ಸ್ವಲ್ಪವೇ ತುಂಟತನವನು ಕಲಿಸು
ಬಾ ಹುಡುಗ ನನ್ನೊಮ್ಮೆ ಪ್ರೀತಿಸು ಇನ್ನೊಮ್ಮೆ ಮುದ್ದಿಸು

