STORYMIRROR

Harish k v Harish

Tragedy

2  

Harish k v Harish

Tragedy

ಹುಚ್ಚು ನೆನಪೇ.....

ಹುಚ್ಚು ನೆನಪೇ.....

1 min
139

ಕನಸಿನಲ್ಲೂ ಬಾರದಿರು ನೆನಪೇ ಮನಸ್ಸನ್ನು ಕಾಡದಿರು ನೆನಪೇ

ಕರೆದರೂ ತಿರುಗದಿರು ನೆನಪೇ ಬಯಕೆಯಲ್ಲೂ

ಬಯಸದಿರು ನೆನಪೇ ನೆನಪಿನಲ್ಲೂ ನೆನಸದಿರು ನೆನಪೇ ಒರಟು ನೆನಪೇ, ಹುಚ್ಚು ನೆನಪೆ.

         

ನಿನ್ನ ನೆನಪಿನ ನೆನಪಲ್ಲೇ ನೆನೆದು ನೆನೆದು ಮನಸ್ಸು

ಒದ್ದೆಯಾಗಿದೆ ಹುಸಿ ಕನಸಿನ ನದಿಯಲ್ಲಿ ಮುಳುಗಿದ ಮನಸ್ಸೆಲ್ಲೋ ಕಾಣೆಯಾಗಿದೆ 

ಅದ ಹುಡುಕ ಹೊರಟ ಹೃದಯವು ಅಲೆಮಾರಿಯಂತೆ ಅಲೆದಾಡಿದೇ

ನಪಿನ ನೆನಪಲ್ಲೇ ನೆನಪೊಂದು ನೆನಪಿದೇ, ನೆನಪೇ, ನನ್ನದೊಂದು ನೆನಪಿದೆ.


ನಗುವ ನೆನಪಲ್ಲಿ ಅಳುವಾದ ನೆನಪೇ, ಕನಸ ತುದಿಯಲ್ಲಿ ಮರೆಯಾದ ನೆನಪೆ

ಮನಸ್ಸಿನಂಗಳದಲಿ ಚಿಗುರಿದ ನೆನಪೇ, ಎದೆಯ ಹಾಳೆಯಲ್ಲಿ ಗೀಚಿದ ನೆನಪೆ

ಮೋಸದ ಬೇಗೆಯಲ್ಲಿ ಬಾಡಿದ ನೆನಪೇ, ದುಃಖದ ಅಂಚಿನಲಿ ಅಳಿಸಿದ ನೆನಪೆ

ಮರಳಿ ಮರಣದಲ್ಲೂ ಮರಳದಿರು ನೆನಪೇ, ಮೂಡ ನೆನಪೆ ಮೋಸದ ನೆನಪೆ.                                               

     


Rate this content
Log in

Similar kannada poem from Tragedy