ನನ್ನ ಜೀವನ
ನನ್ನ ಜೀವನ
ನನ್ನ ನೋವ ನೆನೆದರೀಗ
ನನ್ನಪ್ಪಣೆಯ ಕೇಳದೆ ಜಾರಿ ಬರುವವು
ಕಂಗಳಲಿ ಕಣ್ಣೀರು
ಮನದಲಿ ಎಷ್ಟೇ ನೋವಿದ್ದರೂ
ಅದನ್ನು ಸಹಿಸಿಕೊಳ್ಳುವ ಕಲ್ಲು
ಹೃದಯವ ಕೊಟ್ಟ ದೇವರು
ಆತನಲ್ಲದೆ ಮತ್ತ್ಯಾರು
ನನ್ನ ಪ್ರೀತಿಪಾತ್ರರ ಸಾವ
ಕಂಗಳಲಿ ತುಂಬಿಟ್ಟುಕೊಂಡು
ಇತರರ ನಗಿಸುವ ಭಾರವ
ನನ್ನ ಮೇಲೆ ತಾ ಹಾಕಿ
ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ
ತನ್ನ ಮನದಂತೆ ಎಲ್ಲವ ನಡೆಸಿ
ನನ್ನ ಭಾವನೆಗಳ
ಸಮಾಧಿ ಮಾಡುತಿಹನು