ಸೋಲು
ಸೋಲು
ಬಹುಪಾಲು ಅರವಟಿಗೆ
ಹೊಟ್ಟೆಗೆ ಹಿಟ್ಟಿಲ್ಲದೆ
ಜುಟ್ಟಿಗೆ ಮಲ್ಲಿಗೆಯ ಶೃಂಗಾರ
ಇರುಳಿಗೆ ಬರುವ ಚಂದ್ರಮ
ನಿರಾಸೆಯ ಚಾಪೆ ಹಾಸಿ ಒರಗಿದವ
ಮಬ್ಬಿನ ಜಾಲದಲ್ಲಿ ಏನಿಲ್ಲ
ಸ್ತಬ್ಧ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ
ಯಶಸ್ಸು ಕಂಡಿತೆಂಬ ನಿರೀಕ್ಷೆಗಳು
ಬಯಲಾದ ಬಯಲಾಟದಲ್ಲಿ
ಕುಣಿತದ ಹದವು ಮೌನವಾಗಿರುವಂತೆ
ಮುರಿದ ಚಪ್ಪರದಲ್ಲಿ ಮದುವೆಯಾದಂತೆ
ಗೆದ್ದವಗೆ ಹಾರ ತುರಾಯಿ
ಸೋತವಗೆ ಮಾತಿನ ಚಾಟಿ
ಮತ್ತೇನಿದೆ ಬದುಕಲು..
ಸೋಲು ಒಮ್ಮೆಯಾದರೆ ಮಾತ್ರ ಬೆಲೆ!
ಹಿಮಪಾದತದಲಿ ಸಿಲುಕಿದ ಸೋಲಿಗೆ
ಮರು ಜೀವ ಬರುವುದೆಂತು?
ಕಣ್ಣೀರು ಎಂದಾದರೂ ಮುತ್ತಾದಿತೆ?
ಸೋತವಗೆ ಗೊತ್ತು ಸೋಲಿನ ಸಂಕಟ!
ಸೋಲೆ ನಿನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು!.
