STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಶ್ರೀ  ಕಾತ್ಯಾಯಿನಿ ದೇವಿ

ಶ್ರೀ  ಕಾತ್ಯಾಯಿನಿ ದೇವಿ

1 min
271

ನಶಿಸುವ ಬದುಕಿಗೆ ಹೊಸ ಚಿಗುರು

ಬೂದಿ ಮುಚ್ಚಿದ ಕೆಂಡದಂತೆ

ಹೊತ್ತು ಮುಳುಗಿದರು

ಅಡಗಿದ ಸೂಪ್ತ ಶಕ್ತಿಯಂತೆ

ಭೂವಿಯೊಮ್ಮೆ ಅಂಗಲಾಚಿದರೂ

ಕಳೆದ ಶಕ್ತಿಯ ಮರುಭರಣದಂತೆ


ಭಯ,ಶೋಕ ಸಂತಾಪಗಳನ್ನು

ಕಷ್ಟ, ದುಃಖ, ನೋವುಗಳನ್ನು

ಹತ್ತಿಕ್ಕಿ ದೂರ ನೂಕುವಾಕೆ

ಮಹಿಷಾಸುರ ರಾಕ್ಷಸನ ಸಂಹಾರಕೆ

ಕಾತ್ಯಾಯಿನಿ ಅವತಾರವೆತ್ತಿದವಳು

ತ್ರಿಮೂರ್ತಿಗಳ ತೇಜಸ್ಸಿನಿಂದಲೇ

ಕಾತ್ಯಮಹರ್ಷಿಯ ಪೂಜೆಯಿಂದಲೇ

ಕಾತ್ಯಾಯಿನಿ ನಾಮಕರಣ


ನಾಲ್ಕು ಕೈಗಳಿಂದ ಸುಶೋಭಿತೆ

ಅಭಯ ಮತ್ತು ವರಮುದ್ರೆಯ

ಎಡಗೈಲಿ ಖಡ್ಗ, ಕಮಲ ಧರಿಸಿದಾಕೆ

ದಶಮಿಯಂದು ಮಹಿಷನ ವಧಿಸಿದಾಕೆ

ಮೋಕ್ಷದತ್ತ ದಾರತೋರಿದಾಕಿ

ಕಾತ್ಯಾಯಿನಿ ಜಗದ ರಕ್ಷಕಿ

ನವರಾತ್ರಿಯ ಆರನೇ ಮಹಾತಾಯಿ

ಕಾತ್ಯಾಯಿನಿ ದೇವಿಗೆ ನಮನ..



Rate this content
Log in

Similar kannada poem from Classics