STORYMIRROR

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಶ್ರೀ ಚಂದ್ರಘಂಟಾ ದೇವಿ

ಶ್ರೀ ಚಂದ್ರಘಂಟಾ ದೇವಿ

1 min
214

ಆಕಾಶದಷ್ಟು ವಿಶಾಲ

ನೀಲಿ ಬಣ್ಣದ ಚಪ್ಪರದಲ್ಲಿ

ಚಂದ್ರನ ಮುಖಾರವಿಂದ

ದಿಟ್ಟಯಾತ್ರೆಯಲ್ಲಿ

ದುಷ್ಟ ಶಕ್ತಿಗಳ ನಿಯಂತ್ರಿಸಿ

ಘಂಟಾನಾದದಲ್ಲಿ

ಮೊಳಗಲಿ ಸತ್ಯದ ವಿಜಯ


ಚಂದ್ರಾಕಾರದ ಘಂಟೆಯನ್ನು

ಮಸ್ತಕದಲ್ಲಿ ಧರಿಸಿಹಳು

ದುರ್ಗೆಯ ಅವತಾರದವಳು

ಸಿಂಹದ ವಾಹನದಲ್ಲಿ

ಘರ್ಜಿಸುತ್ತ ಸಾಗಿಹಳು

ದಶದಿಕ್ಕುಗಳಲ್ಲಿ ಸಂಚರಿಸಿ

ದಶಕರಗಳಲ್ಲಿ ಶಸ್ತ್ರಾಸ್ತ್ರಗಳು

ಮೂರನೇ ಕಣ್ಣನ್ನು ತೆರೆದಿಟ್ಟು

ಜಗತ್ತನ್ನು ಕಾಯ್ವವಳು

ಕಡುನೀಲಿ ಬಣ್ಣದ ಚಲುವೆ

ನಮ್ಮೊಳಗಿನ ಧೈರ್ಯದ ನಿಲುವೆ.



Rate this content
Log in

Similar kannada poem from Classics