ನಲ್ಮೆಯ ಹೊಂಬೆಳಕು
ನಲ್ಮೆಯ ಹೊಂಬೆಳಕು
ಕಂಗಳಲಿ ಅರಳಿದೆ
ಮೌನದ ಮುಂಗುರುಳು
ಸನಿಹದಲಿ ನೀನಿರಲು ಸಾಕೆನಗೆ
ಮೆಲ್ಲನೆ ಎದೆ ಬಡಿತದಂತೆ
ಎಲ್ಲೊ ಹುಡುಕುವ ಬಳ್ಳಿಯಂತೆ
ಕಣ್ಮುಂದೆ ಇದ್ದರೂ ಮರೆಯಾದೆ
ಮೋಡದಂಚಲಿ ಅವಿತ ರವಿಯಂತೆ
ಮನಸ್ಸಿನ ಹೊಯ್ದಾಟದ ಮುಂದೆ
ಎಲ್ಲವೂ ಗೌನ.
ನಾನು ನೀನು ಮೀನು ಗೀನು
ಎಂಥಹ ಚಂಚಲತೆ ನೋಡೆ
ನೀ ಕೊಟ್ಟ ಉಡುಗೊರೆ
ಮೈಚಳಿಯ ಬಿಟ್ಟು ನಿಂತಿದೆ
ಸಾಗರದ ಅಲೆಯಂತೆ
ನಿನ್ನ ಹೊರತು ನನಗಾರಿಲ್ಲ
ಬದುಕಿನ ಬಂಡಿಯ ನಡೆಸಲು
ಜೀವದ ಕೊನೆಯುಸಿರು
ತಾಳ್ಮೆಯ ಜೋಕಾಲಿಯಲಿ
ನಲ್ಮೆಯ ಹೊಂಬೆಳಕು
ಇನಿಯನ ದನಿಯಲಿ
ಅಡಗಿದೆ ಪ್ರಕೃತಿಯ ಮಡಿಲು
ಇಷ್ಟೇ ಸಾಕು ಬದುಕಿಗೆ
ಇರುಳಲಿ ಬೆಳಗುವ ಶಶಿಯಂತೆ!