STORYMIRROR

Rashmi R Kotian

Romance

4.2  

Rashmi R Kotian

Romance

ಸ್ನೇಹ ಪ್ರೀತಿಯಾದಾಗ

ಸ್ನೇಹ ಪ್ರೀತಿಯಾದಾಗ

1 min
3.1K


ಹುಡುಗನ ಸ್ನೇಹವರಿಯದ ನಾ

ಮನಸ್ಸಿಂದ ಒಪ್ಪಿಕೊಂಡ ಮೊದಲ ಸ್ನೇಹಿತ ನೀ

ನನ್ನಿನಿಯ ಇಂದಲ್ಲ ನಾಳೆ ಬರುವನು

ನಿನ್ನಿನಿಯೆ ಇಂದಲ್ಲ ನಾಳೆ ಬರುವಳು


ಎಂದು ನಿನ್ನ ನಾ ಸ್ನೇಹಿತನಂತೆ ಮನಸಾರೆ ಪ್ರೀತಿಸಿದೆ, ಪೂಜಿಸಿದೆ

ಗಾಢವಾಯಿತು ನನಗೆ ನಿನ್ನ ಮೇಲಿನ ಸ್ನೇಹ,ಅಭಿಮಾನ.

ಕಾಡಿತು ಮನದಿ ಎನಗೆ ಇದುವೇ ಪ್ರೀತಿಯೇನೋ ಎಂಬನುಮಾನ.

ಇನಿಯನಿಗಿಂತ ಮಿಗಿಲಾದೆ ನೀ

ನಿನ್ನಾತ್ಮದ ಜೊತೆ ಕೊನೆವರೆಗೂ ಇರಬೇಕೆಂದು ಬಯಸಿದೆ ನಾ


ಇದೆಲ್ಲದರರಿವು ನಿನಗಿಲ್ಲ

ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ

ಹೇಳಬೇಕೆನಿಸುವುದು ನಿನಗೆ ನನ್ನೀ ಮನದ ವಿಚಾರ,

ಹೇಗೆ ನಿವೇದಿಸಲಿ ನಿನಗೆ ನನ್ನೊಲವ?


ತಿಳಿದಿಲ್ಲ ನನಗಾ ಆಚಾರ

ಏನು ಮಾಡಲಿ ನಾ?

ಅರಿಯದಾಗಿದೆ ಈ ಮನ.



Rate this content
Log in

Similar kannada poem from Romance