ಒಡೆದ ಹೃದಯ
ಒಡೆದ ಹೃದಯ
ಒಡೆದ ಹೃದಯ ನನ್ನದು
ಅದ ಒಡೆದ ಹೃದಯ ನಿನ್ನದು
ನನಗರಿವಿಲ್ಲದೆಯೇ ನಾನಿನಗದನ್ನ ನೀಡಿದೆ
ನಿನಗರಿವಿಲ್ಲದೆಯೇ ನೀನದನ್ನ ಒಡೆದೆ
ನೆನಪಿದೆಯಾ ಆ ಮಧುರ ದಿನ?
ನಿನ್ನ ಮೊದಲಾಸಲ ಮಾತಾಡಿಸಿದಾಗನಿಸಿತ್ತು ನನಗದು ಸುದಿನ.
ನೆನಪಿದೆಯಾ ಆ ದುಃಖದ ದಿನ?
ನನ್ನ ಮನಸ್ಸು ನಿನ್ನ ನಿಜರೂಪ ಕಂಡು ಸತ್ತು ಆಗಿತ್ತು ಹೆಣ.
ಕಣೀರು ಜಲಧಾರೆಯಂತೆ ನನ್ನ ಕಣ್ಣಿಂದ ಹರಿದ ದಿನ ಅಂದು
ಒರೆಸಲು ಕೂಡ ಕರುಣೆ ತೋರಿಸಲಿಲ್ಲ ನೀನನಗಂದು,
ಒರೆಸಿಕೊಂಡರೂ ಮತ್ತೆ ಮತ್ತೆ ಸುರಿಯುತ್ತಿತ್ತು ನನ್ನ ಕಣ್ಣೀರ ಬಿಂದು
ಎಲ್ಲೆಲ್ಲೂ ಒಂಟೀತನ ಕಂಡ ದಿನವಂದು
ಅನಿಸಿತ್ತು ಮತ್ತೆ ನೀನ್ಯಾರೋ ನನಗೆಂದು
ಆದರೂ ಮತ್ತೆ ಮತ್ತೆ ಅನಿಸಿತ್ತು ನೀ ನನಗೇ ಎಂದು
ಕನ್ನಡಿಯಂತಿದ್ದ ನನ್ನ ಹೃದಯ ಒಡೆದೆ ನೀನು,
ಜೋಡಿಸಲಾಗುವುದಿಲ್ಲ ಯಾರಿಂದಲೂ ಮತ್ತದನ್ನು.
ಕನಸ ಲೋಕದಲ್ಲಿದ್ದ ನನ್ನ ಎಚ್ಚರಿಸಿದೆ ನೀ ನಲ್ಲ
ನೀನಿಲ್ಲದಿದ್ದರೂ,ನಿನ್ನ ನೆನಪೊಂದಿದ್ದರೆ ಸಾಕು ನನಗದೇ ಹವಳ
ಈಗ ನನಗೆ ನಾನೇ ಎಲ್ಲ
ಜೀವನ ಬೇವಿನಂತಿದ್ದರೂ ನನಗದುವೇ ಬೆಲ್ಲ