STORYMIRROR

Prabhakar Tamragouri

Romance Classics Others

4  

Prabhakar Tamragouri

Romance Classics Others

ಕರಗುವ ಮುನ್ನ ನೀ ಬರುವೆಯಾ ......?

ಕರಗುವ ಮುನ್ನ ನೀ ಬರುವೆಯಾ ......?

1 min
424

ಮುಂಜಾವಿನ ಚುಮುಚುಮು 

ಬೆಳಕು ಮೂಡುವ ಸಮಯ 

ತಣ್ಣನೆಯ ಗಾಳಿ ಮೈ ಸೋಕಿದಾಗ 

ಮನದಾಳದಲ್ಲಿ ಮೂಡಿದ ಚಿಂತೆಯ ಬದಿಗೊತ್ತಿ 

ನಾಳೆಯ ಬೆನ್ನಟ್ಟಿ ಹೊರಟೆ ಆದರೆ ,

ಹಿಂದಿನ ನೆನಪುಗಳೇ ಮತ್ತೆ ಮತ್ತೆ 

ಕೈಬೀಸಿ ಕರೆಯುತಿದೆ 


ಆ ಚಳಿಯಲ್ಲೂ ಬೇಡ ಬೇಡವೆಂದರೂ 

ನನ್ನ ಮೈಮನಗಳನ್ನೆಲ್ಲಾ ಬಿಗಿದಪ್ಪಿ 

ಮುಗುಳು ನಗೆ ಸೂಸುತ್ತಾ 

ನಾ ಮಿಸುಕಾಡಿದರೂ ಬಿಡುತ್ತಿಲ್ಲ 

ಮುದುಡಿ ಅದರ ತೋಳ್ತೆಕ್ಕೆಯಲ್ಲಿ ಬಂಧಿಯಾಗಿ 

ಹಿತವಾಗಿ ನರಳುತ್ತಿರುವೆ 

ಬೆಳಕು ಮೂಡುವ ಸಮಯಕ್ಕೆ 

ಮನಸ್ಸು ಖಾಲಿಯಾಗಿ , 

ಕಾಲದ ಸುಳಿಯಲ್ಲಿ ಸಿಲುಕಿ 

ಸೊರಗಿ ಬಿಕ್ಕುತ್ತಿದೆ 


ಏನೂ ತೋಚುತ್ತಿಲ್ಲ 

ಮೌನಕ್ಕೆ ಶರಣಾಗಿ ನಲುಗಿದ್ದೇನೆ 

ಯಾತಕ್ಕೆ ಇಂತಹ ಶಿಕ್ಷೆ ....?

ನಾ ಮಾಡಿದ ತಪ್ಪಾದರೂ ಏನು .....?

ಕೇಳಿದರೂ ಉತ್ತರವಿಲ್ಲ ಎಲ್ಲಾ ಒಗಟಾಗಿದೆ !

ಮನದಲ್ಲಿ ಮೂಡಿದ ಆಸೆಯ ಕೊಡಿ 

ನೀನಿಲ್ಲದೆ ಬದುಕಬಲ್ಲೆ ಎಂದರೂ 

ಹಿಂದಿನ ನೆನಪು ಬಿಡುತ್ತಿಲ್ಲ 

ಮುಂದೆ ಏನೋ ಹೇಗೋ ...?! ತೋಚುತ್ತಿಲ್ಲ 

ನಡುವೆ ಸಿಕ್ಕ ನನ್ನಲ್ಲಿ ಈಗ ಏನೂ ಉಳಿದಿಲ್ಲ 

ಯಾವುದೂ ಬೇಡವಾಗಿದೆ 

ನನ್ನಲ್ಲಿ ಮೂಡಿದ ಕನಸೂ ನಾಶವಾಗಿದೆ 

ಒಮ್ಮೆಯಾದರೂ ನಿನ್ನ ತೋಳ್ಬಂಧಿಯಾಗಿ 

ನಗುನಗುತ್ತಾ ಸಾಗಬೇಕೆಂದಿರುವೆ 

ನಿನ್ನಾಸರೆಯಲಿ ಬದುಕಬೇಕೆಂದರೂ ಆಗುತ್ತಿಲ್ಲ 

ಏನು ಮಾಡಲಿ ? ನೀನಾದರೂ ದಾರಿ ತೋರಿಸಬಲ್ಲೆಯಾ ?

ಕಾಯುತ್ತಿರುವೆ ಚಾತಕ ಪಕ್ಷಿಯಂತೆ 

ನಿನ್ನ ಒಂದು ಭರವಸೆಗಾಗಿ ಮನಸ್ಸು ಬಿಗಿ ಹಿಡಿದು 

ಕಾಣಲಾರದ ಕನಸು ಹೊದ್ದು 


ಬದುಕಬೇಕೆಂಬ ಆಸೆಯ ಚಿಗುರು 

ಚಿವುಟಿರುವ ಹಿಂದಿನ ನೆನಪು ಧುತ್ತೆಂದು 

ಎದುರಾಗಿ ಆರ್ಭಟಿಸುತ್ತಿದೆ 

ನಾ ಅದರ ಕಾಲಬುಡದಲ್ಲಿ 

ಮೇಣದ ಬತ್ತಿಯ ಹಾಗೆ 

ಹನಿ ಹನಿಯಾಗಿ ಕರಾಗುತ್ತಿರುವೆ 

ಕರಗುವ ಮುನ್ನ ನೀ ಬರುವೆಯಾ ...??



Rate this content
Log in

Similar kannada poem from Romance