Arjun Maurya

Romance Classics Inspirational

4  

Arjun Maurya

Romance Classics Inspirational

ಮಿಲನ

ಮಿಲನ

1 min
391


ಮಣ್ಣಿನೊಳಗಣ ಸಾರದಂತೆ ನನ್ನ ನಿನ್ನೀ ಮಿಲನ |

ನೀರನೊಳಗಿನ ಮೀನಿನಂತೆ ನನ್ನ ನಿನ್ನೀ ಮಿಲನ ||


ಬೆಳಕಿನೊಳಗಿನ ಜ್ಯೋತಿಯಂತೆ ನನ್ನ ನಿನ್ನೀ ಮಿಲನ |

ಗಾಳಿಯೊಡಲಿನ ತಂಪಿನಂತೆ ನನ್ನ ನಿನ್ನೀ ಮಿಲನ ||


ಗಗನದೊಳಗಿನ ಶೂನ್ಯದಂತೆ ನನ್ನ ನಿನ್ನೀ ಮಿಲನ |

ಪಂಚಭೂತ ತತ್ವದಂತೆ ನನ್ನ ನಿನ್ನೀ ಮಿಲನ || 


ಫಲದ ತುಂಬು ಮಾಗಿದಂತೆ ನನ್ನ ನಿನ್ನೀ ಮಿಲನ |

ಬೇರ ತುಂಬಾ ಸತ್ವದಂತೆ ನನ್ನ ನಿನ್ನೀ ಮಿಲನ ||


ಜೇನ ಹನಿಯ ಮಧುರದಂತೆ ನನ್ನ ನಿನ್ನೀ ಮಿಲನ |

ಹೂವು ಹಿಡಿದ ಗಂಧದಂತೆ ನನ್ನ ನಿನ್ನೀ ಮಿಲನ ||


ಮಂಜಿನೊಳಗಣ ಬಿಸಿಲಿನಂತೆ ನನ್ನ ನಿನ್ನೀ ಮಿಲನ |

ಕುಂಚದೊಳಗ ಚಿತ್ರದಂತೆ ನನ್ನ ನಿನ್ನೀ ಮಿಲನ ||


ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | 

ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ ||


ಆಸೆ ತಂದ ಮೋಡದಂತೆ ನನ್ನ ನಿನ್ನೀ ಮಿಲನ |

ಹೃದಯ ಮೀಟಿದಂಥ ಹಾಡು ನನ್ನ ನಿನ್ನೀ ಮಿಲನ ||


ಬಣ್ಣಧರ್ಮಜಾತಿ ಇರದ ಪ್ರಕೃತಿಕರುಣ ಚಲನ |

ಗಂಡುಹೆಣ್ಣು ಮಿಲನದೊಳು ವಿಶ್ವಜೀವ ನಿಯಮ ||



Rate this content
Log in

Similar kannada poem from Romance