ನೀ ಎಲ್ಲಿಯವ?
ನೀ ಎಲ್ಲಿಯವ?
ನೀ ಎಲ್ಲಿಯವ?
ಕೇಳಬೇಕಿತ್ತು ಅವನ ನಗುನಗುತಾ ಬಂದವನ
ನೀ ಎಲ್ಲಿಯವ?
ಯಾವ ಊರು..
ವೆಷ್ಟೋ..ನಾನ್ ವೆಜ್ಯೋ
ದೃಢೀಕರಿಸಬೇಕಿತ್ತು | ಊರಾದರೆ..
ಯಾವ ಏರಿಯಾ..
ಯಾವ ಕೇರಿ..?
ಬೇಕಿತ್ತು ನಿರ್ಧರಿಸಲು
ಯಾರವರೆಂದು?
ನಮ್ಮವರೇ?..
ದೃಢೀಕರಿಸಲು
ಏಳು ಸುತ್ತಿನ
ಮಾತು-ಕತೆ..!?
ಸುತ್ತುಬಳಸು..
ನಂತರವಷ್ಟೇ ಬಳಸು..!
