STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Drama Inspirational

4  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Drama Inspirational

ವ್ಯಾಪ್ತ

ವ್ಯಾಪ್ತ

1 min
170


ವ್ಯಾಪ್ತ ಶ್ರೀ ಹರಿಯ ವ್ಯಾಪ್ತ

ಇವನಿಗಿಲ್ಲ ಭಂಧನದ  ಸೂಕ್ತ

ಇರುವನು ಪಂಚ ಭೂತನಾಗಿ

 ತನ್ಮಾತ್ರದಿ ಕೊಡುವನು ಜೀವರಿಗೆ

ಇಹಪರಗಳಲಿ ಸುಖ ನೆಮ್ಮದಿ ಪ್ರಾಪ್ತಿ


 ಜ್ಞಾನೇಂದ್ರಿಯಕರ್ಮಗಳಲಿ ಗುಣನಾಗಿ 

ವಿದ್ಯ ,ಬುದ್ಧಿ, ಸಿದ್ಧಿ ,ಪ್ರಸಿದ್ಧಿ ಗಳಲಿ ಇದ್ದುಬ

ನಾಲ್ಕು ದೇಹಗಳಿದ್ದು ಪಂಚರೂಪಿ ಸಲುಹುತಲಿ

ಜಾಗರ ಸ್ವಪ್ನಗಳಲಿ ನಿಂತು ಆಡಿಸುತಲಿ


ಸಕಲರಲಿ ಇರುತಿಹನು ಪೂಜ್ಯ ಪೂಜಕನಾಗಿ

ಕೊಡುತಿಹನು ಸತ್ವ ,ರಜೋ, ತಮಗಳನು

ಸರ್ವೇಷನು ಇರುತಿಹನು ಪ್ರೇರಕನಾಗಿ ಸರ್ವರಲಿ

ವೇದಗಳಿಗೂ ನಿಲಕಲಾರ ಪವನಾತ್ಮಕ ಪರಮಾತ್ಮ


ಇಂದ್ರಿಯಗಳಿಗೆ ಗ್ರಹಣ ಗ್ರಾಹ್ಯಕ್ಕೆ ಕಾರಣನು

ಹದಿನಾಲ್ಕು ಲೋಕಕೆ ಆಪ್ತನಾಗಿ ಜಗಕೆ ಸಲಹುವನು ಪವಿಹರಿಣ್ಮಿಗಳಂತೆ ತ್ರಿವಿಧ ಚೇತನಕೆ ಬೆಳುಸುವನು

ನಿರ್ಲಿಪ್ತನು ಹರಿಯು ದೇವ ಮಾನವ ದಾನವರಲಿದ್ದು


 ಸ್ವೀಕರಿಸುಸದಿಲ್ಲ ಕ್ಷುಲ್ಲ ಮಾನವರ ಈ ದೇವ

ಸೂರ್ಯನಲ್ಲಿದ್ದು ವ್ಯಕ್ತ ಚೇತನಕೆ ಚೇತನಿವ

ಫಲಗಳಲಿ ರಸವಾಗಿ ಇರುವ ಮಾರಮಣನಿವ

ಬಣ್ಣ ಬಣ್ಣದ ಮಣಿಗಳಾಗೆ ವ್ಯತ್ಯಾಸನಿವ


ದೋಷದ ಲೇಪವಿಲ್ಲದ ಪರಮಾತ್ಮ ನಿರ್ದೋಷನಿವ

ಅವರ ಭೋಗಕೆ ಕನುಸಾರ

ಕಾದ ಲೋಹದ ರೀತಿಯಿವನು


ಮಕ್ಕಳ ಆಟದಿ ತರಹ ಸೃಷ್ಟಿ ಕರ್ತನಿವನು

ವಿವಿಧ ಭಾಷೆವೇಷಗಳಲಿ ಇರುವನು

ಕಾಲ ಗುಣ ಕರ್ಮ ಕೆಸರು ಇಲ್ಲದವನು

ಅನಂತ ಗುಣಗಳಿರುವ ಒಂದು ರೂಪದೋಳಿರುವನು ಅಪ್ರತಿಮಮಲ್ಲ


Rate this content
Log in

Similar kannada poem from Drama