ಗುರುವಿನ ಅರಿವು
ಗುರುವಿನ ಅರಿವು
*ಗುರು ಪೌರ್ಣಿಮದ ನಿಮಿತ್ಯ
*ಗುರುವಿನ ಪಾದಾರವಿಂದಕೆ ಪದ ಕುಸುಮದರ್ಪಣೆ*
ಹುಟ್ಟಿನ ಗುಟ್ಟಿನ ಕರುಣೆ ಬಯಸಿ ಬಂದೆ
ಮನಸ್ಥಿರವಿಡುತ ಜೀವನ ಸ್ಥರದಲಿ ನಿಂದೆ
ತಿಳಿದೆ ಈ ಮಿತಿಗೆ ನೀನೇ ಗತಿಯೆಂದು
ನಾನು
ಗತಿಗೆಟ್ಟ ಮತಿಗೆ ಸ್ತುತಿಯ ರುಚಿಯ ಹೆಚ್ಚಿಸಿದೆ ನೀನು
ಇಳೆಗೆ ಬಂದ ಗಳಿಗೆಗೆ ಸಾರ್ಥಕ ಜೀವನ
ತರುಳ ಮರುಳೆಗೆ ಸಿಕ್ಕಿತು ನಿಮ್ಮಯ
ಕರುಣ
ನಾನು ಅಹಂನ ಅಂಗದಿ ಭಂಗವಾಯಿತು
ಏನು ಇಲ್ಲದ ಜೀವನ ಹಂಗು ಇಲ್ಲದಾಯಿತು
ಗುರುವಿನ ನಾಮದಿ ಪ್ರಿಯಕೃಷ್ಣ ಸಿಕ್ಕನು
ಅವನೇ ನೀಡುವ ಇಂಬ ಕೊಡುತ ನಕ್ಕನು