ಜಾಗ್ರತೆಯ ದೀಪಾವಳಿ
ಜಾಗ್ರತೆಯ ದೀಪಾವಳಿ
ಕರೋನಾ ಕತ್ತಲೆಯು ಕಳೆಯಿತು
ಜಗದಿ ನಗುತ ಸಂಭ್ರಮಾ ಬಂದಿತು
ಹರುಷದಿ ದೀಪಾವಳಿ ತಂದಿತು
ಮನೆ ಅಂಗಡಿ ಶ್ರೀಂಗಾರವಾಯಿತು
ನವವಧುವಿನಂತೆ ಕಂಗೊಳಿಸಿತು
ಜನರ ಮೊಗದಿ ನಗವು ಕಂಡಿತು
ಸಕಾರಾತ್ಮಕ ಬೆಳೆವಣೆಗೆಯಾಯಿತು
ಭರದಿ ಚಟುವಟಿಕೆಗಳು ಸಾಗಿತು
ಮಾಸ್ಕ ಧರಿಸಿ , ಸಾಮಾಜಿಕ ಅಂತರ ಇರುತ
ದೀಪಾವಳಿ ಹಬ್ಬವ ಆಚರಿಸೋಣ