*ಮೊಬೈಲಿನಅರಿವು*
*ಮೊಬೈಲಿನಅರಿವು*
ನಿಮಿಷದಲಿ ವಿಷಯ ಮೊಬೈಲಲಿ
ತಿಳಿಯುವುದು
ಜ್ಞಾನಾರ್ಜನೆಗೆ ಮಾಹಿತಿಗಳ ಸಿಂಧುವಾಗಿರುವುದು
ಕುಳಿತೆ ಮಾರಾಟ ಖರೀದಿಯ ವಹಿವಾಟುವಿರುವುದು
ಅಂಗೈಯಲ್ಲೇ ವಿಸ್ಮಯ ಲೋಕವ
ತೆರೆಯುವುದು
ಕರೋನಾದಿ ಮೊಬೈಲ್ಲೇ ಅತ್ಯುತ್ತಮ ಸಂಗಾತಿಯಾಗಿರುವುದು
ಮೊಬೈಲಲಿ ಅಗಣಿತ ಉಪಯೋಗವಿರುವುದು
ಮೊಬೈಲ ಬಂದಿದೆ ಸಂಭಂಧಗಳನ್ನು ದೂರ ಮಾಡಿದೆ
ಹಿರಿಕಿರಿಯರಲ್ಲಿ ಅಂತಕರಣದ ಮಾತು ಕಡಿಮೆಯಾಗಿದೆ
ಅನಾರೋಗ್ಯ ಹೆಚ್ಚಾಗಿ ನೂರೆಂಟು ಕಾಯಿಲೆಗಳು ಕಾಣುತಿದೆ
ಹೊರಾಂಗಣ ಕ್ರೀಡೆಗಿಂತ ಮೋಬೈಲ ಗೇಮ ಬಹಳಾಗಿದೆ
ದೇವರ ಪೂಜೆಗಿಂತ ಮೋಬೈಲ್ ಗೀಚುವುದು ಹೆಚ್ಚಾಗಿದೆ
ದೇಹದ ಅಂಗಕ್ಕೆ ಭಂಗ ಬರುವುದು ಖಾತ್ರಿಯಾಗಿದೆ
ಉಪಯೋಗದ ವಸ್ತುವಿನ ಅರಿವಿರಬೇಕು
ಮೊಬೈಲ್ ಬಳಕೆಯ ಇತಿಮಿತಿ ಗೊತ್ತಿರಬೇಕು
ವಸ್ತುವಿಗೆ ಎರಡು ನೋಟ ಲಾಭಹಾನಿ
ತಿಳಿದಿರಬೇಕು
ಕಾಲಕ್ಕೆ ತಕ್ಕಂತೆ ಹೊಸದನ್ನು ಅಪ್ಪುತ
ನಡೆಯೋಣ
ವಿಜ್ಞಾನದ ಜೊತೆ ಸುಜ್ಞಾನ ಬೆರೆಸಿ
ಕಲಿಯೋಣ
ಹಿತಮಿತದಲ್ಲಿದ್ದರೆ ಎಲ್ಲವು ಅಮೃತ ಸಮಾನ ತಿಳಿಯೋಣ