ಬಿಟ್ಟಿರದು ಜೀವ ನಿನ್ನನು ಕಾಣದೇ
ಬಿಟ್ಟಿರದು ಜೀವ ನಿನ್ನನು ಕಾಣದೇ
ನಿನ್ನ ಕಾಣದೇ ಈ ಜೀವ ನಿಲ್ಲದು
ನಿನ್ನ ನೋಟ ಒಂದೇ ಸಾಕು
ನನ್ನ ಜೀವಕೆ ಒಂದು ಸೆಲೆ
ಅಂದಿಹೆ ಅಂದು ನನ್ನ ಕಂಡು
ಮತ್ತೇಕೆ ದೂರ ಹೋಗಿರುವೇ
ಬೇಡವಾಯಿತೇ ನನ್ನ ಸನಿಹ
ಮಾತಿನಲಿ ಹುಡುಕುತ ಕುಅರ್ಥ
ಜೀವನದಲಿ ಕಾಣುತ್ತ ಸುಅರ್ಥ
ಒಳ್ಳೆಯ ಕೆಲಸ ನೆನಪು ಬಾರದೇ
ಸವಿ ಮಾತುಗಳು ತಿಳಿಯದೇ
ಒಬ್ಬರ ಮಾತಿಗೆ ಸರಿ ಅನ್ನಬಹುದೇ
ಸರಿತಪ್ಪುಗಳ ಚಿಂತನೆ ಇಲ್ಲವೇ
ಕೋಪದಿ ಹೊಡಿಯುವುದರಲ್ಲಿನಿದೆ
ಕೈ ಹಿಡಿದು ಬಂದವಳು ಕ್ಷುಲ್ಲಕವಲ್ಲ
ಅವಳ ಮನಸ್ಸನು ಅರಿಯುದು ಕಲೆ
ನಿನ್ನ ಕುಟುಂಬದ ಸದಸ್ಯೆ ಎಂದು ತಿಳಿ
ಹೆತ್ತ ತಾಯಿ ಶ್ರೇಷ್ಠ ಇರುವಳು
ಕೈ ಹಿಡಿದ ಹೆಂಡತಿ ಕನಿಷ್ಠಳಲ್ಲ
ಜೀವನದಿ ಗಂಡಹೆಂಡಿರ ಸಮಪಾಲು
ಗೌರವದಿ ಅಂತಕರಣದಿ ಬಾಳು
ಸಂಸಾರದಿ ಸರಿತಪ್ಪು ಸಹಜ
ವಿಶಾಲ ನೋಟದಿ ಕಾಣು ಮನುಜ
ಎಲ್ಲರೂನು ಪ್ರೀತಿಯಲಿ ಮಾತಾಡುತ
ಸಂಸಾರದಲಿ ಸಂತೋಷದಿ ಸಾಗುತ