STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಪ್ರೇಮಪತ್ರ

ಪ್ರೇಮಪತ್ರ

1 min
398


ಪ್ರೇಮಪತ್ರಗಳು


ಅಂದು 


ಬರುವನೋ ಬಾರನೋ?

ಅಂಚೆಯ ಅಣ್ಣ ಇಂದು

ತರುವನೋ ತಾರನೋ?

ಪ್ರೇಮ ಪತ್ರವನು

ಪ್ರಿಯರನ ಸಂದೇಶಕ್ಕೆ 

ಕಾದು ಕಾದು ಸೋತವು

ಕಾತರದ ಕಂಗಳು

ಟ್ರಿಣ್ ಟ್ರಿಣ್ ಟ್ರಿಣ್ ಶಬ್ದಕೆ

ಕಾದಿಹವು ಕಿವಿಗಳು

ಪೋಸ್ಟ್ ಪೋಸ್ಟ್ ಪೋಸ್ಟ್

ಅಂಚೆಯಣ್ಣನ ಕೂಗಿಗೆ

ಕಾದು ಕುಳಿತಿಹವು 

ಹದಿ ಹರೆಯ ಹೃದಯಗಳು

ಮುಚ್ಚಿದ ಪ್ರೇಮಪತ್ರಗಳನು

ಪುಸ್ತಕದ ನಡುವೆ

ಮುಚ್ಚಿಟ್ಟು ಕದ್ದು ಓದಿ 

ಕೆನ್ನೆ ಕೆಂಪಾಗಿ ಸಂಭ್ರಮಿಸುವ

ಆ ದಿನಗಳಲಿ ಅಂಚೆಯಣ್ಣನೇ

ಪ್ರೇಮಿಗಳ ಮೇಘದೂತ


ಇಂದು


ಮುಚ್ಚಿದ ಪತ್ರಗಳಿಗಾಗಿ

ಅಂಚೆ ಅಣ್ಣನ ಕಾಯುವ

ಆ ದಿನಗಳು ಈಗ 

ಎಲ್ಲಿ ಮರೆಯಾದವು?,

ಪತ್ರದೊಳಗೆ ಮುಚ್ಚಿಟ್ಟ

ಬೆಚ್ಚನೆಯ ಪ್ರೇಮಸಲ್ಲಾಪ

ಇಂದು ಮರೆಯಾದವೇ?

ಎಲ್ಲವೂ ಬಟಾಬಯಲು

ವಾಟ್ಸಾಪ್,ಈ ಮೇಲ್ ಗಳಲಿ

ಸೆಕೆಂಡುಗಳಲ್ಲಿ ಹರಿದಾಡುವ

ಪ್ರೇಮ ಸಂದೇಶಗಳು

ಸೆಕೆಂಡುಗಳಲ್ಲಿ ಥಟ್ಟನೆ

ಓದಿ ಮುಗಿಸಿ ಬಿಡುವ

ಆ ಚುಟುಕು ಸಲ್ಲಾಪಗಳು 

ಸೆಕೆಂಡುಗಳಲ್ಲಿ ಸೊರಗಿ

ಬಾಡಿ ಹೋಗುವ ಪ್ರೀತಿ 

ಎಲ್ಲವೂ ತಾಂತ್ರಿಕ

ಎಲ್ಲವೂ ಯಾಂತ್ರಿಕ 



Rate this content
Log in

Similar kannada poem from Abstract