ಜನುಮದ ಜೋಡಿ
ಜನುಮದ ಜೋಡಿ
ಜನುಮಕೆ ಜೊತೆಯಾದ ಬಂಧವಿದು
ಏಳೆಜ್ಜೆ ಇಟ್ಟು ನಡೆಯೋಣ ಬಾ
ಕಿರುಬೆರಳು ನಂಬಿದ ಅನುಬಂಧವಿದು
ಪ್ರೀತಿ ಸವಿಯನು ಹಂಚೋಣ ಬಾ
ಹೃದಯ ಮಂದಿರದ ಅನುರಾಗವಿದು
ಚೈತ್ರದ ಚಿಗುರಾಗಿ ನಲಿಯೋಣ ಬಾ
ನನ್ನೊಲವಿಗೆ ಜೊತೆಯಾದ ನಿನಾದವಿದು
ಜೇನಂತೆ ನಾವು ಸಿಹಿಯಾಗೋಣ ಬಾ
ಜೀವದ ಜೀವವಾಗಿ ಬೆಸೆದ ರಾಗವಿದು
ಬಾಳಿಗೆ ಶೃತಿ ತುಂಬಿ ಸಂಗೀತವಾಗೋಣ ಬಾ
ನವ ಜೋಡಿಯಂತೆ ನಲಿವ ಬದುಕಿದು
ಸದಾ ಜೊತೆಯಾಗಿ ಬದುಕಾಗೋಣ ಬಾ
ಮಂಜು ಸುರಿದ ಬದುಕಿನ ಬಯಲಿದು
ನಲಿಯುತ ಒಲವ ಪನ್ನೀರಾಗೋಣ ಬಾ
ಮುಪ್ಪಿನಲ್ಲು ಅಪ್ಪಿ ಬಿಡದ ಒಲವಿದು
ಬಿಡದೆ ಸಾಗುತ್ತಾ ಒಲವ ತೇರಾಗೋಣ ಬಾ