STORYMIRROR

ವಿದ್ಯಾತನಯ ವಿವೇಕ

Drama Romance Classics

4  

ವಿದ್ಯಾತನಯ ವಿವೇಕ

Drama Romance Classics

ಈ ಹೊತ್ತಿನ ತಲ್ಲಣ...

ಈ ಹೊತ್ತಿನ ತಲ್ಲಣ...

1 min
356

ನಿಂತಿರುವೆ ನಾನಿಂದು ಪರದೆಯ ಹಿಂದೆ

ಕೊನೆಯ ಬಾರಿ ನಾನು ನಾನಾಗಿರುವಂತೆ


ಇನ್ನೆರಡು ನಿಮಿಷದಲಿ ಬೀಳುವುದು ಹಾರ

ಜೊತೆಯಲ್ಲೇ ನಡೆಯುವುದು ನನ್ನ ಸಂಹಾರ


ಹೊಸದೊಂದು ಮನೆಯಲ್ಲಿ ಹೊಸತೊಂದು ಹೆಸರು

ಹಳೆಯ ಮನೆ ಅದಾಗುವುದೆನ್ನ ತವರು


ಪರದೆಯ ಮುಂದಿಹಿದು ಮತ್ತೊಂದು ಜೀವ

ಇದೆಯಂತೆ ಅವನಿಗೆ ಪ್ರೀತಿಯ ಭಾವ


ಅರಿಯದಾ ಜನರೊಡನೆ ಬೆರೆಯುವುದು ಹೇಗೆ

ನಯನಕೆ ಕಾಣುವ ಮುಖ ಒಂದೆ ತಾನೆ


ಆ ಮುಖದ ಹಿಂದೆ ಇನ್ನೆಷ್ಟು ಮುಖವಿದೆಯೋ

ಈ ಕಷ್ಟ ಹೆಣ್ಣಿಗೊಂದೆ ಅದು ಹೇಗೆ ಸರಿಯೋ

ಸುತ್ತಲೂ ನಿಂತಿಹರು ನನ್ನೆಲ್ಲ ಬಂಧುಗಳು

ಆದರೂ ಇಂದಿಗೂ ಒಬ್ಬಂಟಿಯೇ ಮಗಳು

ಎಲ್ಲರ ಮೊಗದಲ್ಲಿ ಸಂಭ್ರಮವು ಮಿಂಚಿಹುದು

ಈ ನನ್ನ ತವಕವದು ಯಾರಿಗೂ ತಿಳಿಯದು


ಅಷ್ಟರಲಿ ಸರಿಯಿತು ಅಂತರದ ಪರದೆ

ಅಕ್ಷತೆಯ ಮಳೆಯಾಯ್ತ ಕ್ಷಣವು ಬಿಡುವಿರದೆ


ಮರೆಯಲ್ಲಿ ನಿಂತಿದ್ದ ಕಣ್ಣೆರಡು ಕಂಡಿತು

ನಿನ್ನೊಡನೆ ನಾನಿರುವೆ ಎಂದೆನಗೆ ಹೇಳಿತು


ಈ ತವಕ ನನ್ನಲಿಯು ಇಹುದು ಸಮವಾಗಿ

ಇಹುದೊಂದೇ ಮುಖವು ನೋಡದನು ಸರಿಯಾಗಿ


ಆ ತವಕ ಮೀರಿಯು ನಗುತಿಹೆ ನಾನಿಲ್ಲಿ

ಬಯಕೆಯದು ಒಂದೇ ನೀನಿರು ಜೊತೆಯಲ್ಲಿ


ವಿಶ್ವಾಸ ಇಟ್ಟಿಹರು ನಮ್ಮಲ್ಲಿ ಈ ಜನರು

ಅದಕೆಂದೆ ಇಷ್ಟೊಂದು ಸಂಭ್ರಮ ಪಡುತಿಹರು


ಸಂಭ್ರಮದಿ ಸೇರಿಕೊ ಇದೆ ಅದಕು ಕಾರಣ

ಇದು ಬರಿಯ ಈ ಹೊತ್ತಿನಾ ತಲ್ಲಣ



Rate this content
Log in

Similar kannada poem from Drama