ನೀನು ಅನ್ನೋ ನಿರುದ್ದೇಶಕ
ನೀನು ಅನ್ನೋ ನಿರುದ್ದೇಶಕ
ಮರೆತೇನಂದ್ರ ಮರೆಯಲಿ ಹ್ಯಾಂಗ....
ಸುಪರೋ ರಂಗ
ತರಲೆ ಹುಡುಗನಾಗ ಹೀರೊನ ಕಂಡಿ
ಮುದ್ರೆಯೊಳಗ ನೀ ಹೆಸರನು ಕಂಡಿ
ಅಂತದೊಳಗ ಆರಂಭವ ತಂದಿ
ಕತ್ತಿಯ ಅಲುಗಿಗ ಓಂಕಾರ ಬರೆದಿ
ತೆರೆಯ ಹಿಂದೆ ಇರಲಾಗಲಾರೆನೆಂದು
ನಾನೇ ದೇವರೆಂದು ನೀ ಮುಂದಕ ಬಂದ್ಯೋ....
ಅವಾಂತರದವನೊಳು ಗುರುವನು ಕಂಡಿ
ಲೇಖನಿ ಮೊನಚಲಿ ಸಾಧನೆ ಕಂಡಿ
ಕಥೆಯ ಒಳಗೆ ನೀ ಕಥೆಯನು ಹೆಣದಿ
ಬುದ್ಧಿವಂತರ ಬುದ್ಧಿ ಕೆಣಕದಿ
ನಿರಭಿಮಾನಿಗಳ ಬಡಿದೆಬ್ಬಿಸುತಲಿ
ಮರೆತ ವೈಭವವ ಮತ್ತೆ ತರತೇನಂದ್ಯೋ.....
ನಿನ್ನೊಳಗೆ ನೀ ನನ್ನನು ಕಂಡಿ
ನಾನೇ ನೀನೆಂಬ ಸತ್ಯವ ಕಂಡಿ
ಯಾರು ತುಳಿಯದ ಹಾದಿಯ ತುಳದಿ
ಕಾರುನಾಡಿಗೆ ನೀ ನಿಜ ನಕ್ಷತ್ರವಾದಿ
ಅಭಿನಯ ಮಾಡುತ ಸಾಧನೆ ಮರೆತು
ತೆರೆಯ ಹಿಂದೆ ಮತ್ತೆ ಬರದೇ ಹೋದ್ಯೋ.....
ಮರೆತೇನಂದ್ರ ಮರೆಯಲಿ ಹ್ಯಾಂಗ....
ಸುಪರೋ ರಂಗ
