STORYMIRROR

Mithun Kumar

Romance Classics Fantasy

4  

Mithun Kumar

Romance Classics Fantasy

ನಾನಾಗಿರುವ - ನಮ್ಮಿಬ್ಬರು

ನಾನಾಗಿರುವ - ನಮ್ಮಿಬ್ಬರು

1 min
316

ನನ್ನ ಈ ಹೃದಯ ಬಡಿತಕ್ಕೆ ಉಸಿರು ನೀನೇನಾ

ನನ್ನ ಈ ಕತ್ತಲ ಬದುಗಿನ ದಾರಿ ದೀಪವು ನೀನೇನಾ

ನನ್ನ ಈ ನೋವಿನ ಜೀವನದ ರಥಸಾರಥಿ ನೀನೇನಾ

ನನ್ನ ಈ ಗೊಂದಲದ ಬದುಕಿನ ಗುರಿ ನೀನೇನಾ


ನಿನ್ನ ನೆರಳಿನಂತೆ ನಿನ್ನನ್ನು ಅನುಸರಿಸುವ ಭ್ರಮೆಗಾರ ನಾನೇನಾ 

ನಿನ್ನ ನೋಡಲು ಹಗಲು ರಾತ್ರಿ ಕಾಯುವ ಕನಸುಗಾರ ನಾನೇನಾ

ನಿನ್ನ ಮೌನವ ಕವನವಾಗಿ ಬರೆಯಲು ಬಂದ ಬರಹಗಾರ ನಾನೇನಾ

ನಿನ್ನ ಸಂತಸಕ್ಕಾಗಿ ಜಗವನೇ ಮೋಸ ಮಾಡುವ ಮೋಸಗಾರ ನಾನೇನಾ 


ನಮ್ಮಿಬ್ಬರ ಸಂಬಂಧದ ಮಾರ್ಗಬೆಸೆಯುವ ಭರವಸೆ ಕೇವಲ ನನದೇನಾ 

ನಮ್ಮಿಬ್ಬರ ಹೆಸರುಗಳು ಒಂದಾಗೀ ಬರೆಯುವ ಬಯಕೆಯು ಕೇವಲ ನನದೇನಾ

ನಮ್ಮಿಬ್ಬರ ಪ್ರಪಂಚಗಳ ಪರಿಚಯ ಪಡಿಸುವ ಪರದಾಟ ಕೇವಲ ನನದೇನಾ

ನಮ್ಮಿಬ್ಬರ ಮನದಾಳದ ಮೌನ ಮರಿಯುವ ಮಂತ್ರ ತಂತ್ರಗಳು ಕೇವಲ ನನದೇನಾ


Rate this content
Log in

Similar kannada poem from Romance