ಕಲ್ಪನೆ
ಕಲ್ಪನೆ
ಕಲ್ಪನೆಯ ತಟದಲ್ಲಿ ಕಾಲ್ಪನಿಕ ಯುಗದಲ್ಲಿ,
ಮೋಹ ಮತ್ಸರವಾಗಿ ನದಿಯೊಳು ಈಷಾಡಲು...
ಆಕಾಶದ ತಪ್ಪಲಿಗೆ ಇಂಚಿಹಾಕುತ,
ಹಾರಬಲ್ಲ ಹಕ್ಕಿಯ ಶೌರ್ಯಕೆ
ಸಿಗ್ಗಾದದಿ ವೆಸಗುತ ಸವಾಲು...
ಅವ(ನೊ)ಳೊಳಗೆ ಅವ(ಳಾ)ನಾಗಿ ಊಹೆಗೆ ಆಹ್ವಾನವು ಭಾವ,
ನಯನ ಕಾಣದ ಬಿಂಬ ಕಂಡಿದೆ ನೀ ನಗಲು...
ಪ್ರೀತಿಸಿದವರು ಜೊತೆಗಿದ್ದರೆ ಭಾವನೆಯ ಬಣ್ಣನೆಗೆ ಸಿಗದು ಭಾವವೆ,
ಅಗೋಚರ ನಾಚಿಕೆಯೆ ಪ್ರೀತಿಗೆ ಮುಗಿಲು...