ಬಂಧನ - ಅನುಬಂಧನ
ಬಂಧನ - ಅನುಬಂಧನ
ಬೆಲೆ ಕಟ್ಟಲಾಗದು ಈ ಸಂಬಂಧಕ್ಕೆ
ಜನುಮ ಜನುಮದ ಅನುಬಂಧಕ್ಕೆ
ಮನ ಮಿಡಿದಿದೆ ನವಿರಾಗಿ
ಕಂಬನಿಯೇ ಸಾಕ್ಷಿ ನುಡಿದು...
ಅರಳಿತು ಮಡಿಲಲ್ಲಿ ಕರುಳಕುಡಿ
ಬರೆಯಿತು ಅಣ್ಣ-ತಂಗಿ ಬಂಧಕ್ಕೆ ಮುನ್ನುಡಿ
ರಕ್ತಬಂಧವಿದು ಭ್ರಾತೃತ್ವ ಸಾರುವ ಪ್ರೀತಿಯ ಬಂಧ
ರಮ್ಯತೆಯ ಸಂಕೋಲೆಯಿದು
ರಕ್ಷೆಯ ಭರವಸೆಯ ವಚನವಿದು
ದೇವ, ದಾನವರ ಸಮರಕ್ಕೆ ಸಾಕ್ಷಿ ಈ ಬಂಧನ
ಸಹೋದರ, ಸಹೋದರಿಯರ ಆತ್ಮಸಾಕ್ಷಿ ಈ ಬಂಧನ
ತಮ್ಮೊಳಗೆ ಹಂಚಿಕೊಳ್ಳುವ ಮುಗಿಯದ ಪ್ರೀತಿ ಬಂಧನ
ಶ್ರಾವಣ ಮಾಸ, ಹುಣ್ಣಿಮೆಯ ಸಂಭ್ರಮದ ಬಂಧನ
ಜನುಮದ ನಂಟು ಪ್ರೀತಿ ವಾತ್ಸಲ್ಯದ ಗಂಟು
ಕಣ್ಮನ
ಸೆಳೆಯುವ ರಂಗು ರಂಗಿನ ರಾಖಿ
ಕೊಳ್ಳುವ ಸಂಭ್ರಮವೇ ಮನದ ತಂಪು
ಹಣೆಗೆ ತಿಲಕ, ಕೈಗೆ ರಾಖಿ..
ಆರತಿಯೊಂದಿಗೆ ಆಚರಣೆ ಈ ಸಿಹಿ ಬಂಧನ
ಅಣ್ಣನ ಆಶೀರ್ವಾದ, ರಕ್ಷಣೆಯ ವಚನ ಪಡೆವ
ಜನ್ಮ ಜನ್ಮದ ಅನುಬಂಧನ
ಪ್ರೀತಿ, ಮಮತೆ, ಗೌರವದ ಸಂಕೇತ
ಈ ರಕ್ಷಾ ಬಂಧನ...
ಅರ್ಥಪೂರ್ಣ ರಕ್ಷಾ ಬಂಧನ
ಗಡಿ ಕಾಯೋ ವೀರರಿಗೆ
ಅನ್ನ ನೀಡೋ ಅನ್ನದಾತರಿಗೆ
ನಮ್ಮ ರಕ್ಷಣೆಯಲ್ಲಿ ತಮ್ಮ ಖುಷಿ ಮರೆತ
ನಿತ್ಯ ಕಾಯೋ ನಮ್ಮ ಪೋಲಿಸರಿಗೆ
ಸ್ವಚ್ಛ, ಸುಂದರ ಭಾರತದ ನಿಜವಾದ
ಪೌರ ಕಾರ್ಮಿಕರಿಗೆ...
ಜೈ ಜವಾನ್... ಜೈ ಕಿಸಾನ್...