STORYMIRROR

ಹೃದಯ ಸ್ಪರ್ಶಿ

Romance Fantasy Others

4  

ಹೃದಯ ಸ್ಪರ್ಶಿ

Romance Fantasy Others

ಹೋಳಿ

ಹೋಳಿ

1 min
350

ಬದುಕಿನಲ್ಲಿ ತುಂಬಿರಲಿ

ಖುಷಿಯ ಬಣ್ಣ

ಚಂದಕ್ಕೆ ಕಟ್ಟು ಹಾಕುವಂತೆ

ಜೊತೆಗಿರಲಿ ನೋವ ಬಣ್ಣ


ಪರಸ್ಪರ ಬೆರೆಯಲಿ ಭಾವ

ಬಣ್ಣಗಳ ಜೊತೆಗೆ

ಸಹೋದರ ಭಾವೈಕ್ಯ

ಮತ್ತೆ ಒಂದಾಗಲಿ..


ಶಶಿರವೂ ಮರೆಯಾಗಿ

ವಸಂತನ ಆಗಮನಕ್ಕೆ

ಬಣ್ಣಗಳ ಓಕುಳಿ

ಬಿದಿಗೆಯ ಶಶಿಯೂ

ಹಾರೈಸುತಿಹನು ಬಾನಿನಲ್ಲಿ

ನಗು ಬೀರುತ್ತಾ..


ಏಳು ಬಣ್ಣಗಳು ಸೇರಿ ಶುದ್ಧ

ಬಿಳಿ ಬಣ್ಣವಾಗುವಂತೆ

ನಮ್ಮಲ್ಲಿನ ಬೇಧವ ಮರೆತರೆ

ನಾವೂ ಒಂದೇ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance