Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಹೃದಯ ಸ್ಪರ್ಶಿ

Inspirational Thriller Others

4.5  

ಹೃದಯ ಸ್ಪರ್ಶಿ

Inspirational Thriller Others

ನೆನಪಿನಚ್ಚು

ನೆನಪಿನಚ್ಚು

1 min
377


ನಿನ್ನೆಯೊಳಗೆ ಇಂದನ್ನು

ನುಂಗುತಿರುವೆ ನೀ

ಕಾಡಬೇಡ ಹೀಗೆ

ನಗುವ ನಾಳೆಯನು

ಅನುಭವಿಸಬೇಕಿದೆ 

ಮನಸು..


ನಿನ್ನೆಗಳ ನೆನಪಿಗೆ

ಇಂದಿನ ದಿನವೇಕೆ

ಬಲಿಯಾಗಬೇಕು..?

ಈ ನೆನಪುಗಳು

ಹೊತ್ತು ತರುತಿರುವ

ಈ ಖಾಲೀತನ ನನಗೂ

ಸಾಕಾಗಿದೆ..


ನಾಳೆಯ ಭವಿಷ್ಯ

ತಿಳಿದಿಲ್ಲ ಎನಗೆ

ಹಾಗೆಂದು ಬರೀ

ನಿನ್ನೆಗಳಲ್ಲೇ 

ಜೀವಿಸಿದರೆ ಹೇಗೆ

ನೋಡಲಿ ನಾಳಿನ

ಸುಂದರ ದಿನವನ್ನು..?


ಉದಯಿಸೋ ರವಿ

ಆ ಚಿಲಿಪಿಲಿ ಇಂಚರ

ತಣ್ಣನೆಯ ತಂಗಾಳಿ

ಹೇಗೆ ಸವಿಯಲಿ

ಆ ಸುಂದರ ಭಾವಗಳ

ಮಾಧುರ್ಯ ತುಂಬಿರೋ

ಕೋಗಿಲೆ ಗಾನ..?!


ಇರಲಿ ನೆನಪುಗಳ ತಂಪು

ಸಾಗಲಿ ಬದುಕು ನಾಳಿನ

ಕನಸುಗಳ ಜೊತೆಯಲಿ..



Rate this content
Log in

Similar kannada poem from Inspirational