Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Jyothi Baliga

Inspirational

4  

Jyothi Baliga

Inspirational

ಪುಸ್ತಕ ಪ್ರೇಮಿ

ಪುಸ್ತಕ ಪ್ರೇಮಿ

1 min
24K


ಬಾಲ್ಯದಿಂದಲೂ ಪುಸ್ತಕ ಓದುವುದೆಂದರೆ ನನಗೆ ಬಲು ಪ್ರೀತಿ

ಬಾಲಮಿತ್ರ, ಚಂದಮಾಮ ಪಂಚತಂತ್ರ ಕಥೆಗಳಾದವು ನನ್ನ ಗೆಳತಿ !


ಯೌವ್ವನದಲ್ಲಿ ಸಾಮಾಜಿಕ, ಪತ್ತೆದಾರಿ, ಭಯಾನಕ ಕಥೆ ಕಾದಂಬರಿಗಳಾದವು ನನ್ನ ಸಂಗಾತಿ;

ಸಾಯಿಸುತೆ,ತ್ರಿವೇಣಿ ,ಅಶ್ವಿನಿ, ಕೌಂಡಿನ್ಯ ಎಂದರೆ ಗೌರವದ ಜೊತೆಗೆ ಭಕ್ತಿ !


ಮನಸ್ಸಿಂದು ಓಡುತ್ತಿದೆ ಆಧ್ಯಾತ್ಮಿಕ,ಪೌರಾಣಿಕ ಪುಸ್ತಕಗಳತ್ತ 

ವಯಸ್ಸಾಗಿದೆಯೆಂದಲ್ಲ, ಓದುವ ದಾಹ ತಣಿಸುವತ್ತ !


ಆಧುನಿಕತೆಯ ದಾಳಿಗೆ ಪುಸ್ತಕಗಳು ಮರಿಚೀಕೆಯಾಗಿದೆ 

ಹೊಸ ತಂತ್ರಜ್ಞಾನ ಬಂದರೂ ಓದುವುದಿನ್ನೂ ಉಳಿದಿದೆ !


ಪುಸ್ತಕಕ್ಕಿಂತ ಉತ್ತಮ ಸ್ನೇಹಿತ ಇನ್ನೊಬ್ಬರಿಲ್ಲ 

ಅರಿವು ಜ್ಞಾನದ ಜೊತೆಗೆ ಮನಸ್ಸಿಗೆ ಸಮಾಧಾನಕ್ಕೇನು ಕೊರತೆಯಿಲ್ಲ !


ನನ್ನ ಮಕ್ಕಳಿಗೂ ಪುಸ್ತಕದ ಪ್ರೀತಿ ಹಿಡಿಸಿರುವೆ 

ಮನೆಯಲ್ಲೇ ಗ್ರಂಥಾಲಯವನ್ನು ತೆರೆದಿರುವೆ !


ನೀವು ಓದಿ ಪುಸ್ತಕವನ್ನು 

ಜ್ಞಾನದಿಂದ ತುಂಬಿ ಮಸ್ತಕವನ್ನು !    



Rate this content
Log in

Similar kannada poem from Inspirational