ಕಾವ್ಯದುಸಿರು
ಕಾವ್ಯದುಸಿರು
ಕಾವ್ಯದ ಒಲವು ನಿನ್ನೊಳು ನೆಲೆಸಿ
ಕನವರಿಸುತಿದೆ ಹಗಲಿರುಳು
ಹಾದಿಗುಂಟ ಹೆಜ್ಜೆಯಿರಿಸಿ
ಮೆಲುಕು ಹಾಕಿ ಸದ್ದಿಲ್ಲದೆ ಹೇಳು
ನನ್ನೊಳಗಿನ ವ್ಯಥೆಯಾವುದೆಂದು?
ನಿನ್ನಾಸೆಯ ಅಲೆಯಲ್ಲಿ ಕರಗಿ
ಕಡಲತೀರದಿ ವಿಲವಿಲ ಒದ್ದಾಡಿ
ನೀರಿಗಾಗಿ ಹಂಬಲಿಸುವ ಮೀನಿನಂತೆ
ಕವಿಗೆ ಉಸಿರೆ ಕಾವ್ಯದ ಸಾಲುಗಳು
ನೀರಿನಲ್ಲಿ ತೇಲುವ ದೋಣಿಯಂತೆ
ನವಿರಾಗಿ ಮನದುಂಬಿ ನಲಿವಂತೆ
ಮನದೊಳು ನೆಲೆಸಿ ಬರೆಸವಂತೆ.