STORYMIRROR

ಶಿವಲೀಲಾ ಹುಣಸಗಿ

Others

3  

ಶಿವಲೀಲಾ ಹುಣಸಗಿ

Others

ಕಂಗೆಟ್ಟ ಹರಿಣಿಯಂತೆ 

ಕಂಗೆಟ್ಟ ಹರಿಣಿಯಂತೆ 

1 min
6

ಮುಂಜಾವಿನ ಮುತ್ತಿನ ಹನಿಗಳು
ಗರಿಕೆಯ ತುಟಿಯಂಚಲಿ ಮಿಂಚಿ
ಮಣ್ಣಿನ ಘಮಲಿಗೆ ಮೈಮರೆಸಿ
ಮುತ್ತಿ‌ನ ತೇರನು ಹೊತ್ತು ತಂದವಳು

ಬಾಗಿದ ತೆನೆಯಂತೆ ಪ್ರೇಮಾಲಾಪನೆ
ಭುಗಿಲೆದ್ದ ಆತಂಕಗಳು
ಬೆಚ್ಚನೆಯ ಎದೆಗೊರಗಿದಂತೆ
ಅಯ್ಯಾ ಎಂದಾಗಲೇನು
ಬೆದರಿನಿಂತ ಮುಂಗುರುಳು
ಕಂಗೆಟ್ಟ ಹರಿಣಿಯಂತೆ 
ಮುತ್ತಿನ ನಶೆಯೊಮ್ಮೆ ನೆತ್ತಿಗೇರಿದಂತೆ.

ಅವನಪ್ಪುಗೆಯಲ್ಲಿ ಜಗತ್ತೆ ಮಾಯಾದಂತೆ
ನೀರುಣಿಸದ ನೆಲಕೆ ಹದವರಿತು ಬಿದ್ದಂತೆ
ಎದೆಗೂಡಲಿ ಅಕ್ಷರದ ಹುನ್ನಾರವು
ಬಿಳಿ ಕೋಟು,ಕರಿಕೋಟಿನ ನಡುವೆ
ಜಿದ್ದಾಜಿದ್ದಿಗೆ ಬಿದ್ದು ಹರಸಾಹಸ ಮಾಡಿದಂತೆ.
 
ಬಂದರ ಬರಲಿ ಬಿಡು ಮುಂಜಾವಿನ ಹನಿಗೆ
ರತ್ನಗಂಬಳಿ ಹಾಸಿದಂತೆ ಜಗದತುಂಬ
ನೇಸರನ ಆರ್ಭಟಕೆ ಎಲ್ಲ ಮರೆಯಾದಂತೆ
ಚಳಿಗೂ ಭಯ! ಬಿಸಿಲಿಗೂ ಭಯ!
ಮಳೆಗೊಂದು ಜೀವ ಭಯವುಂಟು.


Rate this content
Log in