STORYMIRROR

ಶಿವಲೀಲಾ ಹುಣಸಗಿ

Classics Inspirational Others

3  

ಶಿವಲೀಲಾ ಹುಣಸಗಿ

Classics Inspirational Others

ಸ್ಕಂದಮಾತಾ ದೇವಿ

ಸ್ಕಂದಮಾತಾ ದೇವಿ

1 min
162

ಸ್ಕಂದಮಾತಾ ದೇವಿ

ಸುಬ್ರಹ್ಮಣ್ಯ ನ ತಾಯಿ

ಸಿಂಹ ವಾಹನದ ತಾಯಿ

ಎರಡು ಕರಗಳಲಿ ಕಮಲ

ತೊಡೆಯ ಮೇಲೆ ಸ್ಕಂದ

ಬಲಗೈಲಿ ಪೊರೆಯುತಿಹಳು

ಎಡಗೈಲಿ ಅಭಯಮುದ್ರೆಯಿಂದ

ಪದ್ಮಾಸನಧಾರಿಣಿಯಿವಳು

ಶ್ವೇತವರ್ಣಿ ಶಾಂತಸ್ವರೂಪಿಣಿ

ಮೋಕ್ಷ ನೀಡುವ ಕಾಯಕದವಳು

ತಾಯಿ ಪೂಜೆಯಿಂದ

ಸಕಲ ಐಶ್ವರ್ಯ ನೀಡುವಾಕೆ

ಪದ್ಮಾಸನಾ ದೇವಿಯೆಂಬ ಹಾರೈಕೆ

ನವರಾತ್ರಿಯ ಐದನೆ ದಿನಕ

ಹಸಿರೆಲೆಯ ಚಂದನ ಲೇಪನ

ಪ್ರಕೃತಿಯ ಮಾತೆಯ ಸ್ವರೂಪ

ಸ್ಕಂದ ಮಾತೆಗೊಂದು ನಮನ..


Rate this content
Log in

Similar kannada poem from Classics