ಎಣಿಕೆ
ಎಣಿಕೆ


ಕಾಲದ ಸತತ ಪ್ರವಾಹದ
ನಡುವೆ, ಗತಿಸಿದ ಕಾಲದ
ಎಣಿಕೆ ಏಕೆ?
ಬದುಕಿನ ಅಗಣಿತ ಲಾಭದ
ನಡುವೆ, ಸಿಗದಿದ್ದುದರ
ಎಣಿಕೆ ಏಕೆ?
ಗೆಳೆಯರ ಸವಿ ಪ್ರೇಮದ
ನಡುವೆ, ಮುಗಿದ ಕೋಪದ
ಎಣಿಕೆ ಏಕೆ?
ಉಜ್ವಲ ಹಗಲು ಇರುವಾಗ
ಮುಂದೆ, ರಾತ್ರಿಯ ಕತ್ತಲ
ಎಣಿಕೆ ಏಕೆ ?
ಸಂತಸದ ಕ್ಷಣಗಳು ತುಂಬಿರಲು
ಮನ, ದುಃಖದ
ಎಣಿಕೆ ಏಕೆ?
ಹೂಗಳ ಸುವಾಸನೆಯ ನಡುವೆ
ಚುಚ್ಚುವ ಮುಳ್ಳುಗಳ
ಎಣಿಕೆ ಏಕೆ?
ಬೆಳಗಿರಲು ಚಂದ್ರನ ಬೆಳದಿಂಗಳು
ಅದರಲ್ಲಿನ ಅಂಕುಡೊಂಕುಗಳ
ಎಣಿಕೆ ಏಕೆ?
ತುಂಬಿರಲು ಸಾಕಷ್ಟು ಒಳ್ಳೆತನ
ನಮ್ಮ ನಿಮ್ಮೆಲ್ಲರಲಿ, ಇರುವ
ಕೆಲವೇ ಕೆಲವು ದೋಷಗಳ
ಎಣಿಕೆ ಏಕೆ ?