ದೇಶದ ಕರೆ
ದೇಶದ ಕರೆ
ಬಾ ಎಂದು ಕರೆಯುತಿದೆ ನನ್ನ ದೇಶ
ಸಮರ್ಪಿಸಲೇ ಈ ನನ್ನ ತನುವ
ನನ್ನುಸಿರಿಗೆ ಹಸಿರು ಕೊಟ್ಟ ನಿನಗೆ
ಕೊಟ್ಟು ಕಾಪಾಡಲೇ ಕೆಂಪಾದ ರಕುತ
ಎಲ್ಲಿ ನೋಡಿದರಲ್ಲಿ ಪಚ್ಚೆ ಪೈರು
ತುಂಬಿ ತುಳುಕುತಿರೆ ನಿನ್ನೊಡಲಲ್ಲೆಲ್ಲಾ
ನೋಡುತ್ತಾ ಮುದಗೊಂಡಿರಲು ಮನವು
ಕೇಳಿಸಿತೆಲ್ಲೋ ಒಂದು ಚೀತ್ಕಾರ
ಹೊಟ್ಟೆ ತುಂಬಾ ಪರಮಾನ್ನ
ಕಣ್ಣ ತುಂಬಾ ಸುಖದ ನಿದ್ದೆ
ಪವಡಿಸಿರಲು ಹಾಯಾಗಿ ಪಲ್ಲಂಗದಲಿ
ಇರಿಯಿತಲ್ಲಾ ಹಸಿವಿನ ಕಂಗಳು
"ಏಕೆ ಮರೆತೆಯೋ ಓ ನನ್ನ ಕಂದ"
ಯಾರೋ ಕರೆದ ಹಾಗಾಯಿತಲ್ಲ
"ಸ್ಮೃತಿ ತಪ್ಪಿದರೆ ನೀನು
ಕಳೆದುಕೊಳ್ಳುವೆ ನನ್ನನು"
ಓ ತಾಯೇ ಬಡಿದೆಚ್ಚರಿಸಿದೆ ನನ್ನನು
ಕಳೆದುಕೊಳ್ಳಲಾರೆ ನಿನ್ನನು
ಕ್ಷಮಿಸು ನನ್ನ ತಪ್ಪನು
ಇದೋ ಬಂದೆ ಎಂದು ಹೊರಟೆನು
