ದೀಪಾವಳಿ
ದೀಪಾವಳಿ
ದೀಪಗಳ ಹಬ್ಬದಲ್ಲಿ
ಭಾವಗಳು ನೂರಾರು
ಉದಿಸದವು ಮನದಿ
ಹಣತೆಗಳ ಸಾಲು ಸಾಲು
ನಾನು ನೀನೆಂಬ ಅಹಂ ಇಲ್ಲದೆ
ಮೇಲು ಕೀಳೆಂಬ ಭೇದವಿಲ್ಲದೆ
ಹಂಚಿತು ಸಮನಾಗಿ ಬೆಳಕನು
ಹಣತೆಗಳ ಸಾಲು ಸಾಲು
ಅಜ್ಞಾನದ ತಿಮಿರ ಕಳೆದು
ಜ್ಞಾನದ ಬೆಳಕ ಬೀರಿ
ಪಸರಿಸಿತು ನಗೆಯ ಎಲ್ಲೆಡೆ
ಹಣತೆಗಳ ಸಾಲು ಸಾಲು
ಬೆಳಕಿನಲಿ ಮಿಂದೆದ್ದ ಹುಲಿಯು
ಮಿನುಗಿತು ನಕ್ಷತ್ರ ಲೋಕದಲಿ
ಬೆಳಗಿದರು ಮನೆ ಮನಗಳ
ಹಣತೆಗಳ ಸಾಲು ಸಾಲು
