STORYMIRROR

B K Hema

Tragedy Inspirational Others

3  

B K Hema

Tragedy Inspirational Others

ಹಸಿವು

ಹಸಿವು

1 min
1.2K

ಅಮ್ಮ ಹಸಿವು, ಅಮ್ಮ ಹಸಿವು

ನೂರಾರು ಆಕ್ರಂದನಗಳ 

ಕರುಳು ಕತ್ತರಿಸುವ ಕೂಗು

ಹರಿಯುವಂತೆ ಕರ್ಣ ಪಟಲ 


ತುತ್ತು ಅನ್ನಕ್ಕಾಗಿ ಹೊತ್ತು ಜೋಳಿಗೆಯ 

ಅಲೆದಲೆದು, ಸೋತು, ಸೊರಗಿ,

ಬಾಡಿ ಬಳಲಿದ ಪುಟ್ಟ ಮಗುವದು

ಆಸೆ ಕಂಗಳಲಿ ನೋಡುತಿಹುದು


ಮೋಜು ಮಸ್ತಿಯ ನಡುವೆ 

ಚೆಲ್ಲಿ ಆಹಾರವ ಮೆರೆದರು 

ಕರುಣೆ ಇಲ್ಲದ ಜನರು 

ಕೇಳದಾಯಿತು ಅವರಿಗೆ ಹಸಿವ ಕೂಗು


ದಯೆಯೇ ಧರ್ಮದ ಮೂಲ 

ಮರೆಯಿತು ಮಂತ್ರ 

ಮರೆಯಿತು ಹೊಣೆ 

ಮೆರೆಯಿತು ಶ್ರೀಮಂತಿಕೆ


ಪರಿಹಾರವಿದಕೆ ಸಮಾನತೆಯ ಸಮಾಜ 

ಅದ ಕಟ್ಟುವುದು ನಮ್ಮ ಹೊಣೆ 

ಅರಿತು ನಡೆದಾಗ ಇದನು

ಮೆರೆವುದು ಮಾನವತೆ


Rate this content
Log in

Similar kannada poem from Tragedy