STORYMIRROR

B K Hema

Abstract Classics Inspirational

4  

B K Hema

Abstract Classics Inspirational

ಭರವಸೆಯ ದಾರಿ

ಭರವಸೆಯ ದಾರಿ

1 min
334

ಕಾರ್ಮೋಡ ಕತ್ತಲೆಯ ನಡುವೆ

ಸಾಗಿದೆ ಪಯಣ ಒಂಟಿಯಾಗಿ

ಎಲ್ಲಿಹುದೋ ನಿನ್ನ ದಾರಿ

ಎಲ್ಲಿಹುದೋ ನಿನ್ನ ಗುರಿ


ತುಂಬಿಹುದು ದುಗುಡ ಕಂಗಳಲಿ

ನಡುಗುತಿಹುದು ತನು ಓಲಾಡಿ

ಹಾರಾಡುತಿಹುದು ಬಿಚ್ಚಿದಾ ಮುಡಿ

ಸ್ಥಿರವಿಲ್ಲದಾ ಹೆಜ್ಜೆಯಿಂ ತಪ್ಪಿತೇ ದಾರಿ


ಮೂರು ದಿನದಾ ಈ ಬದುಕು

ನಮ್ಮದಲ್ಲ ನೀ ಬಿಟ್ಟು ಬಿಡು

ನೋವಿಗೆ ಕುಗ್ಗದೇ ನೀನಿರು

ನಲಿವಿಗೆ ಹಿಗ್ಗದೇ ಸ್ಥಿರವಾಗಿರು


ಕಲ್ಲು ಮುಳ್ಳುಗಳಾ ಹಾದಿಯಿಂ

ಸುಮ ಪುಷ್ಪದಿ ಕಾಣು

ಸಮಚಿತ್ತದಿಂದಿರಲು ನೀಂ

ಕಾಂಬುದು ಗುರಿ ನೋಡು


ನಿಶ್ಚಯವಾಗಿಹುದು ನಿನ್ನ ಗುರಿ

ನಿಶ್ಚಯವಾಗಿಹುದು ನಿನ್ನ ದಾರಿ

ಇದು ಬಲ್ಲವನು ಆ ಹರಿ

ಅದ ನಂಬಿ ಎಂದೆಂದು ನೀ

ಸವೆಸು ಭರವಸೆಯ ದಾರಿ



Rate this content
Log in

Similar kannada poem from Abstract