STORYMIRROR

B K Hema

Classics Inspirational Others

4  

B K Hema

Classics Inspirational Others

ತಾಯಿಯ ಮಮತೆ

ತಾಯಿಯ ಮಮತೆ

1 min
682

ಅಮ್ಮನ ಜೋಗುಳ

ಬರಿ ಪದವಲ್ಲ

ತುಂಬಿಹುದದರಲಿ

ತಾಯೊಲವೆಲ್ಲ


ಅಮ್ಮನ ಮಡಿಲು

ಬರಿ ಸ್ಥಳವಲ್ಲ

ಮಲಗಲು ನೀನು

ಮರೆಯುವೆ ನೋವೆಲ್ಲ


ಅಮ್ಮನ ಕೈ ತುತ್ತು

ಬರಿ ತಿನಿಸಲ್ಲ

ಸವಿಯಲು ನೀನು

ಅಮೃತ ಬೇಕಿಲ್ಲ


ಅಮ್ಮನ ಏಟು

ಬರಿ ಸಜೆಯಲ್ಲ

ಕಲಿಯಲು ಪಾಠವ

ಬಾಳುವೆ ಜಗದಲ್ಲೆಲ್ಲ


Rate this content
Log in

Similar kannada poem from Classics