Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಹೃದಯ ಸ್ಪರ್ಶಿ

Romance Tragedy Inspirational

4.5  

ಹೃದಯ ಸ್ಪರ್ಶಿ

Romance Tragedy Inspirational

ಪದಗಳೆಂಬ ಮಾಯೆ

ಪದಗಳೆಂಬ ಮಾಯೆ

1 min
438


ಅದೇನು ಮೋಡಿ

ಮಾಡಿರುವೆಯೋ ನನಗೆ

ನನ್ನ ನೆಚ್ಚಿನ ವಿಷಯಗಳೆಲ್ಲವೂ

ಹೀಗೆಯೇ ನಿನ್ನಂತೆ ಬರೀ

ಮೌನದಲ್ಲೇ ಸಂತಸ ನೀಡುವಂತಹವು


ಆ ಬಿಳಿಯ ಹಾಳೆಯೂ

ಅದರ ಮೇಲೆ ಮೂಡುತ್ತಿರುವ

ಈ ದುಂಡಗಿನ ಅಕ್ಷರಗಳು ಎಲ್ಲವೂ

ಕೇವಲ ನನ್ನ ಮನದ ಭಾವಕೆ ಮತ್ತಷ್ಟು

ಹಂಬಲದ ಹೂವನ್ನು ಪೋಣಿಸುತ್ತಿವೆ..


ಈ ಬರವಣಿಗೆಯಲ್ಲಿ

ಅದೇನು ಖುಷಿಯೋ ನಾ ಕಾಣೆ

ಆದರೂ ಬಿಡದು ಈ ಮನಸು ನನ್ನ ಸುಮ್ಮನೆ

ಪದೇ ಪದೇ ಅದರತ್ತಲೇ ನನ್ನನ್ನು ಸೆಳೆಯುತ್ತಿವೆ..


ಅತ್ತರೂ ನಕ್ಕರೂ ಆ ಕ್ಷಣವೇ

ಮೂಡುತ್ತಿವೆ ಅಕ್ಷರಗಳು ಪದಗಳಲ್ಲಿ

ಭಾವಗಳಲ್ಲಿ ಬೆರೆತು ಸರತಿ ಸಾಲಿನಲ್ಲಿ..

ಒಂದರ ಹಿಂದೊಂದರಂತೆ ನೂಕು ನುಗ್ಗಲಿಲ್ಲದೆ


ಅದೇನು ಹಿತವೋ

ಈ ಮನಸ್ಸಿಗೆ ನಿನ್ನ ಕಂಡಾಗ

ಪದಗಳಲ್ಲಿ ಪದ ಬೆರೆತು ಭಾವವಾದಾಗ

ಸಂಗೀತದಲ್ಲಿ ಸ್ವರ ಬೆರೆಯುವಂತೆ

ಅಕ್ಷರಗಳೆಂಬ ಹೂ ತೋಟದಲ್ಲಿ ನಾನು

ಅಲೆದಾಡುತ್ತಿರುವೆ ಮನಸ್ಸು ಬಯಸಿದ

ಕಂಪನ್ನು ಅರಸುತ್ತಾ..!!



Rate this content
Log in

Similar kannada poem from Romance